ಯಲ್ಲಾಪುರ: ಎಷ್ಟೇ ತೊಡಕಾದರೂ ಜನತೆಗೆ ವಸ್ತುನಿಷ್ಠ ವರದಿ ಕೊಡುವುದಕ್ಕೆ ತಮ್ಮಲ್ಲಿನ ಬದ್ದತೆ ಮತ್ರು ಶುದ್ದತೆಯನ್ನು ಪಣಕ್ಕಿಡಬೇಕಾದ ಪರಿಸ್ಥಿತಿ ಪತ್ರಕರ್ತರದ್ದಾಗಿರುತ್ತದೆ.. ಸಮಾಜವನ್ನು ತಿದ್ದುವ ತಾವುಗಳು ಸಮಾಜಮುಖಿಯಾದ ಕಾರ್ಯವನ್ನು ಮಾಡಿ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಪಟ್ಟಣದ ಅರಣ್ಯಭವನದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ,ಸನ್ಮಾನÀ ಮತ್ತು ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉಧ್ಘಾಟಿಸಿ ಮಾತನಾಡಿದರು
ಕಲಾವಿದ ಸತೀಶ ಯಲ್ಲಾಪುರ ಪರಿಸರ ಮತ್ತು ಮಾದ್ಯಮ ಕುರಿತು ಉಪನ್ಯಾಸ ನೀಡಿ,ಎಲ್ಲಾ ಕಾಲಘಟ್ಟದಲ್ಲೂ ಪರಿಸರದ ಉಳಿವಿಗೆ ಮತ್ತು ಜಾಗೃತಿಗೆ ಮಾಧ್ಯಮಲೋಕ ತನ್ನದೇ ಆದ ಕೊಡುಗೆ ನೀಡಿದೆ.ಪರಿಸರವನ್ನು ಮಾಲಿನ್ಯಗೆಡಿಸುವ ಸಂಗತಿಗಳನ್ನು ಪತ್ರಿಕೆಗಳು ಸದಾ ಬರೆದು ಎಚ್ಚರಿಸುತ್ತಿರಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ ಯಾವದೇ ಮೀಡಿಯಾ ಬಂದರೂ ಪತ್ರಿಕೆಗಳಿಗಿರುವ ತೂಕ ಕಡಿಮೆಯಾಗುವದಿಲ್ಲ . ಈಗಲೂ ಹೆಚ್ಚು ವಿಶ್ವಾಸರ್ಹ ಸುದ್ದಿಗಾಗಿ ಪತ್ರಿಕೆಗಳನ್ನೇ ಅವಲಂಬಿಸಿರುವz.ÀÄ ಸುಳ್ಳಲ.್ಲಪತ್ರಕರ್ತರು ಎಡ ಬಲ ಪಂಥ ನೋಡದೇ ರಾಷ್ಟಿçÃಯ ಚಿಂತನೆಗೆ ಆದ್ಯತೆ ನೀಡಿದರೆ ಮಾತ್ರ ಸಮಾನತೆ ಬೆಳೆಯಲು ಸಾಧ್ಯೆವೆಂದರು. ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ ಇಡಿ ಜಗತ್ತು ಸೇರಿದಂತೆ ಪುಟ್ಟ ಗ್ರಾಮದ ಆಗು ಹೋಗುಗಳನ್ನು ತಿಳಿಸುವ ಅತಿ ಸೂಕ್ಷö್ಮ ಜವಾಬ್ದಾರಿ ಪತ್ರಕರ್ತನದ್ದಾಗಿರುತ್ತದೆ.
ಪತ್ರಿಕೆಗಳು ಎಲ್ಲರನ್ನು ತಲುಪುವ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದರು.ವಾ.ಕ.ರಾ.ರ.ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಮಾತನಾಡಿದರು.
ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಉಮಾಮಹೇಶ್ವರ ಮೊಳೆಮನೆ, ಸತೀಶ ಯಲ್ಲಾಪುರ,ಬಿ.ಜಿ.ಹೆಗಡೆ ಗೇರಾಳ ಹಾಗೂ ಪತ್ರಿಕಾ ವಿತರಕ ರಾಜು ಉಡುಪಿಕರ್,ಹಾಗೂ ರಾಜ್ಯ ಸರಕಾರದ ಸರ್ವೋತ್ತಮ ಪ್ರಶಸ್ತಿ ಪುರಸ್ಕೃತ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ನೂತನವಾಗಿ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಜಿಲ್ಲಾಧ್ಯಕ್ಷ ಜಿ.ಸುಬ್ರಾಯ ಬಕ್ಕಳ,ಜಿಲ್ಲಾ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ, ಕಾರ್ಯಕಾರಿಣಿ ಸದಸ್ಯೆ ಪ್ರಭಾವತಿ ಗೋವಿ ಅವರನ್ನು ಸಚಿವರು ವೇದಿಕೆಯಲ್ಲಿ ಗೌರವಿಸಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ಟ ಉಪಸ್ಥಿತರಿದ್ದರು.ಕಾನಿಪ ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ ಆನಗೋಡ ಅಧ್ಯಕ್ಷತೆ ವಹಿಸಿದ್ದರು.ಆಶಾ ಸಂಗಡಿಗರು ಪ್ರಾರ್ಥಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಅಣಲಗಾರ ಸ್ವಾಗತಿಸಿದರು. ಉಪಾಧ್ಯಕ್ಷ,ಜಿ.ಎನ್.ಭಟ್ಟ ಪ್ರಾಸ್ತಾವಿಕಗೈದರು. ಸದಸ್ಯ ಜಯರಾಜ ಗೋವಿ ಸನ್ಮಾನಿತರನ್ನು ಪರಿಚಯಿಸಿದರು.ಸದಸ್ಯÀ ಸುಬ್ರಾಯ ಬಿದ್ರೆಮನೆ ನಿರ್ವಹಿಸಿದರು.ಖಜಾಂಚಿ ದತ್ತಾತ್ರಯ ಕಣ್ಣಿಪಾಲ್ ಸಹಕರಿಸಿದರು . ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು,ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
Leave a Comment