ಯಲ್ಲಾಪುರ : ಯಲ್ಲಾಪುರದ ಬೀಗಾರ ಮೂಲದ,ಪ್ರಸಕ್ತಗುಜರಾತಿನ ಅಹಮದಾಬಾದ್ ಆನಂದ ನಿಕೇತನ ಶಾಲೆಯ ವಿದ್ಯಾರ್ಥಿನಿ ದಿಶಿತಾ ಕೋಮಾರ ಇವಳು ಐ ಸಿ ಎಸ್ಇ ಹತ್ತನೇ ತರಗತಿ ಫಲಿತಾಂಶದಲ್ಲಿ ದೇಶಕ್ಕೆ ಮೂರನೇ ಸ್ಥಾನ ಹಾಗೂ ಗುಜರಾತಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.
ದಿಶಿತಾ ಕೋಮಾರ್ ಇವಳು 497/500(ಶೇ. 99.4) ಅಂಕ ಪಡೆದಿರುತ್ತಾರೆ, ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಕ್ರಮವಾಗಿ ಸೂರತ್ ಮತ್ತು ಅಹಮದಾಬಾದ್ ನಲ್ಲಿ ಪೂರೈಸಿರುತ್ತಾಳೆ.ದಿಶಿತಾ ಕೋಮಾರ್ ಯಲ್ಲಾಪುರದ ಬೀಗಾರ ಮೂಲದ ಪ್ರಸ್ತುತ ಗುಜರಾತ ಗಾಂಧಿನಗರದ ಐಪಿಎಸ್ ಅಧಿಕಾರಿ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ನರಸಿಂಹ ಕೋಮಾರ ಹಾಗೂ ಶಾರದ ಕೋಮಾರ ದಂಪತಿಗಳ ಪುತ್ರಿಯಾಗಿದ್ದಾಳೆ.
ವಿಜ್ಞಾನ ಗಣಿತ ಸಾಮಾನ್ಯ ಜ್ಞಾನ ಒಲಂಪಿಯಾಡಿನಲ್ಲಿ ಚಿನ್ನದ ಪದಕಗಳನ್ನು 8 ಮತ್ತು9ನೇ ತರಗತಿಯಲ್ಲಿ ಗಳಿಸಿರುತ್ತಾರೆ. ಅಭ್ಯಾಸ ಅಷ್ಟೇ ಅಲ್ಲದೆ ಸಹ ಪಠ್ಯ ಚಟುವಟಿಕೆಗಳಾದ ಭರತನಾಟ್ಯ ಪ್ರಬಂಧ, ಚಿತ್ರಕಲೆ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ಪದಕ ವಿಜೇತಳಾಗಿರುತ್ತಾರೆ. ಎ.ಎಸ್.ಆಯ್.ಎಸ್.ಸಿ ಚರ್ಚಾ ಸ್ಪರ್ಧೆಯಲ್ಲಿ 2021ರಲ್ಲಿ ನಾರ್ತ್‌ವೆಸ್ಟ್ ಜೋನ್ ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.
ಕೊವಿಡ್ 19 ಮಹಾಮಾರಿಯೂ ತನ್ನ ಅಭ್ಯಾಸ ಚಟುವಟಿಕೆಗೆ ಅಡ್ಡಿಪಡಿಸಿದ್ದರು. ಪಠ್ಯಪುಸ್ತಕ ಮತ್ತು ಆನ್ ಲೈನ್ ಸಂಪನ್ಮೂಲ ಮತ್ತು ಸ್ವ ಪರಿಶ್ರಮದಿಂದ ಈ ಸಾಧನೆ ಮಾಡಿದ್ದೇನೆ ಎಂದು ಹೇಳುವ ದಿಶಿತಾ ಕೋಮಾರ ತನ್ನ ಸಾಧನೆಗೆ ಶಿಕ್ಷಕರು ಪಾಲಕರು ಸಹಪಾಠಿಗಳು ಪ್ರೋತ್ಸಾಹಿಸಿದ್ದನ್ನು ನೆನಪಿಸಿಕೊಳ್ಳುತ್ತಾಳೆ.
Leave a Comment