ಯಲ್ಲಾಪುರ : ಪಟ್ಟಣದ ಹೊರವಲಯದಲ್ಲಿರುವ ಬಾಳಗಿಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶ ದ್ವಾರದಲ್ಲಿ ಮಳೆ ನೀರು ನಿಂತು ಆವಾಂತರ ಸೃಷ್ಟಿಸಿದೆ. ಇದರಿಂದಾಗಿ ಮಕ್ಕಳು ಶಾಲೆಗೆ ಹೋಗುವದೇ ದುಸ್ತರವಾಗುತ್ತಿದೆ. ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೇ ಶಾಲೆಯ ಪ್ರವೇಶದ್ವಾರದಲ್ಲಿಯೆ ನೀರು ಸಂಗ್ರಹವಾಗಿದ್ದು,ಇಲ್ಲಿಯೇ ಅಂಗನವಾಡಿ ಇದ್ದು ಅಲ್ಲಿಯೂ ಸುತ್ತ ಮುತ್ತ ನೀರು ನಿಂತಿದ್ದ ರಿಂದ ಪುಟ್ಟ ಪುಟ್ಟ ಮಕ್ಕಳು ಶಾಲೆಗೆ .ಅದರಲ್ಲಿಯೇ ನಡೆದುಕೊಂಡು ಬರುತ್ತಾರೆ. ಇದರಲ್ಲಿ ಹಾವು, ಕ್ರೀಮಿ ಕೀಟ ಸೇರಿಕೊಂಡರೆ ಎಂಬ ಭಯ ಒಂದೆಡೆಯಾದರೆ, ಈ ಶಾಲೆಯ ಹಿಂಬದಿಗೆ ಯಾವದೆ ಕಂಪೌAಡ ಇಲ್ಲದಿದ್ದರಿಂದ ಕಸ ಕಡ್ಡಿ , ಹಂದಿ ನಾಯಿಗಳ ಆವಾಸ ಸ್ಥಾನವಾಗಿದೆ .ಇದರಿಂದ ಮಕ್ಕಳ ಸುರಕ್ಷೆ ಬಗ್ಗೆ ಹಾಗೂ ರೋಗ ಹರಡುವ ಭಯಾತಂಕ ಶಿಕ್ಷಕರು ಹಾಗೂ ಪಾಲಕರದ್ದಾಗಿದೆ.ಶಿಕ್ಷಕರು ಈ ಎಲ್ಲ ಸಮಸ್ಯೆಗಳ ಕುರಿತು ಈಗಾಗಲೇ ಸ್ಥಳಿಯ ಅಧಿಕಾರಿಗಳ ಗಮನಕ್ಕೆ ತಂದು ಕಂಪೌAಡ ನಿರ್ಮಿಸುವಂತೆ ಹಾಗೂ ನೀರು ಹರಿದು ಹೋಗುವ ಹಾಗೆ ವ್ಯವಸ್ಥೆ ಮಾಡಿಕೊಡಿ ಎಂದು ತಿಳಿಸಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಶಾಲೆಯ ಶಿಕ್ಷಕರು, ಪಾಲಕರು ತಿಳಿಸಿದ್ದಾರೆ.
Leave a Comment