ಯಲ್ಲಾಪುರ : ದೇಶದ ಬೆನ್ನೆಲುಬಾಗಿರುವ ಕೃಷಿಕನಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅವರಿಗೆ ಅರಿವು ಇರುವಂತಾಗಬೇಕು. ಅವರ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆ ಸಮಯಕ್ಕೆ ಸರಿಯಾಗಿ ದೊರಕುವಂತಾಗಬೇಕು ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.
ಪಟ್ಟಣದ ತಾಲೂಕ ಪಂಚಾಯತ ಆವರಣದಲ್ಲಿ ವೈದ್ಯಕೀಯ ಸೇವಾ ಇಲಾಖೆ ಕೇಂದ್ರ ಪುರಸ್ಕೃತ ಯೋಜನಯಡಿ ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕಿಗೆ ನೀಡಲಾದ ೩ ಸಂಚಾರಿ ಪಶು ಚಿಕಿತ್ಸಾ ವಾಹನ ಹಾಗೂ ಕೃಷಿ ಇಲಾಖೆಯ ರೈತ ಸಂಜೀವಿನಿ ಮತ್ತು ಕೃಷಿ ಅಭಿಯಾನದ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿಯೇ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಲು ಅಧಿಕಾರಿಗಳೆಲ್ಲರು ಶ್ರಮವಹಿಸಬೇಕು ಎಂದರು.
ಪಶು ವೈದ್ಯಾಧಿಕಾರಿ ಸುಬ್ರಾಯ ಭಟ್ಟ ಮಾಹಿತಿ ನೀಡಿ ಮಾತನಾಡಿ ಯಲ್ಲಾಪುರ ತಾಲೂಕಿಗೆ ೨ ಚಿಕಿತ್ಸಾ ವಾಹನ ದೊರೆತಿದೆ. ಅಗಸ್ಟ್ ತಿಂಗಳಾಂತ್ಯಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ತಲಾ ಒಂದೊಂದು ವೈದ್ಯರು, ಕಾಂಪೌಂಡರ್ ಹಾಗೂ ಚಾಲಕರೊಂದಿಗೆ ಕಾರ್ಯ ನಿರ್ವಹಿಸಲಿವೆ. ಚಿಕಿತ್ಸೆಗೆ ಅವಶ್ಯವರಿವ ಎಲ್ಲ ಹೈ-ಟೆಕ್ ವ್ಯವಸ್ಥೆಯಿದ್ದು, ಪ್ರಮುಖವಾಗಿ ಗ್ರಾಮೀಣ ಭಾಗದ ಜನರಿಗೆ ಸಹಾಯಕವಾಗಲಿದೆ. 1962 ಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ ಎಂದರು.
ಸಹಾಯಕ ಕೃಷಿ ಅಧಿಕಾರಿ ನಾಗರಾಜ ನಾಯ್ಕ ಮಾತನಾಡಿ, ರೈತ ಸಂಜೀವಿನಿ ವಾಹನದಲ್ಲಿ ಸಂಚಾರಿ ಲ್ಯಾಬ್ ಇದ್ದು, ರೈತರ ಸ್ಥಳದಲ್ಲಿಯೇ ಮಣ್ಣಿನ ಪರೀಕ್ಷೆ ಮಾಡಿ ಮಾಹಿತಿ ನೀಡಲಾಗುವುದು. ಅಲ್ಲದೇ ರೈತರ ತೊಂದರೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಲಾಗುವುದು. ಕೃಷಿ ಅಭಿಯಾನದ ರಥವು ಒಂದು ವಾರದ ಕಾಲ ತಾಲೂಕಿನ ಎಲ್ಲ ಗ್ರಾಮ ಪಂಚಾಯತಗಳಿಗೆ ತೆರಳಿ ಸರ್ಕಾರವು ರೈತರಿಗೆ ನೀಡುತ್ತಿರುವ ಯೋಜನಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ರೈತರಿಗೆ ಮೇವಿನ ಬೀಜ ವಿತರಸಲಾಯಿತು ಹಾಗೂ ಕರಡೊಳ್ಳಿ ಗೋಶಾಲೆಗೆ ಪಶು ಇಲಾಖೆಯ ವತಿಯಿಂದ ಪ್ರಸಕ್ತ ವರ್ಷದ ನಿರ್ವಹಣೆಗೆಂದು 15 ಲಕ್ಷ ಅನುದಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಜಿಲ್ಲಾ ಪಶು ವೈದ್ಯಾಧಿಕಾರಿ _, ಪ್ರಮುಖರಾದ ಉಮೇಶ ಭಾಗ್ವತ್, ಕೃಷಿ ಹಾಗೂ ಪಶು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ, ಬುಧವಾರ ನಡೆದ ಪ್ರಕೃತಿ ವಿಕೋಪ ಕುರಿತಾದ ಸಭೆಯಲ್ಲಿ ಸಚಿವರು ಸೂಚಿಸಿದಂತೆ ತೀವೃ ಸ್ವರೂಪದ ಹಾನಿಗೊಳಗಾದ ಮನೆ ಮಾಲಿಕರಿಗೆ ಮೊದಲ ಹಂತದ ಅನುದಾನವನ್ನು ಸಚಿವ ಶಿವರಾಮ ಹೆಬ್ಬಾರ್ ಸಾಂಕೇತಿಕವಾಗಿ ವಿತರಿಸಿದರು.
Leave a Comment