ಯಲ್ಲಾಪುರ: ಪಟ್ಟಣದ ಕಾಳಮ್ಮನಗರದಲ್ಲಿ ತಾಲೂಕಾ ಕ್ರೀಡಾಂಗಣದಭಿವೃದ್ಧಿ ಕುರಿತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಚಿವ ಹೆಬ್ಬಾರ ಮತನಾಡಿ ಅಭಿವೃದ್ಧಿಗೆ ಹಣದ ಕೊರತೆಯಿಲ್ಲ.ಪಟ್ಟಣದ ತಾಲೂಕಾ ಕ್ರೀಡಾಂಗಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 97.50 ಲಕ್ಷ ರೂಪಾಯಿ ವಿಶೇಷ ಅನುದಾನವು ಮಂಜೂರಾಗಿದ್ದು.
ಆ ಹಣವನ್ನು ಕ್ರೀಡಾಂಗಣಕ್ಕೆ ಏನೇನು ಅವಶ್ಯಕತೆಯಿರುವದರ ಕುರಿತು ಸರಿಯಾದ ಮಾಸ್ಟರ ಪ್ಲಾನ ಮಾಡಿ ಯೋಜನೆ ಯ ಹಂತಗಳನ್ನು ಅನುಸರಿಸಿ ಅಭಿವೃದ್ದಿಗೆ ಹಣ ವಿನಿಯೋಗಿಸಬೇಕು ಎಂದರು.
ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾದಾಸ ಮಾತನಾಡಿ ಕ್ರೀಡಾಂಗಣದಲ್ಲಿ ಸೂಕ್ತ ಲೈಟಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಯುವ ಮುಖಂಡ ವಿವೇಕ ಹೆಬ್ಬಾರ ಮತನಾಡಿ ಒಂದು ಸುಸಜ್ಜಿತ ಕ್ರೀಡಾಂಗಣ ವಾಗುವಂತೆ ಓಲಂಪಿಕ ಕ್ರೀಡೆ ಸಂಬAಧಿಸಿದAತೆ ಎಲ್ಲ ಕ್ರೀಡೆ ಗಳಿಗೂ ಅವಕಾಶವಾಗುವಂತೆ ಯೋಜನೆ ರೂಪಿಸಬೇಕು ಎಂದರು . ಉದ್ಯಮಿ ,ಹಿರಿಯ ಕ್ರೀಡಾಪಟು ರವಿಶಾನಭಾಗ , ಅಂತರಾಷ್ಟಿçÃಯ ಕ್ರೀಡಾಪಟು ತಾಂಡೂರಾಯನ, ಕ್ರೀಡಾಧಿಕಾರಿ ನಾರಾಯಣ ನಾಯಕ ಅವರೊಂದಿಗೆ ಕ್ರೀಡಾಂಗಣದಲ್ಲಿ ರನ್ನಿಂಗ ಟ್ರಾö್ಯಕ್ ಇನ್ನಿತರ ಸೌಲಭ್ಯ ಕುರಿತು ವಿಸೃತವಾಗಿ ಚರ್ಚೆ ನಡೆಸಿದರಲ್ಲದೇ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಗೋಪಾಲ ಕೃಷ್ಣ ಗಾಂವಕರ, ಕಾರ್ಯದರ್ಶಿ ಡಾ ರವಿಭಟ್ಟ ಬರಗದ್ದೆ , ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ , ಪ್ರಮುಖರಾದ ಉದ್ಯಮಿ ಬಾಲಕೃಷ್ಣ ನಾಯಕ ,ಶಿರೀಷ ಪ್ರಭು,ಗಣಪತಿ ಮುದ್ದೇಪಾಲ, ಪಪಂಸದಸ್ಯ ಸತೀಶ ನಾಯ್ಕ, ಹಾಗೂ ಸಾರ್ವನಿಕರು ಇದ್ದರು.
Leave a Comment