ಯಲ್ಲಾಪುರ: ತಾಲ್ಲೂಕಿನ ದೇಹಳ್ಳಿ ಯ ಕುಂಬ್ರಾಳದ ಆರ್ ಎಸ್ ಎಸ್ ಪ್ರಚಾರಕ ಸತೀಶ ರಾಮಚಂದ್ರ ಕಟ್ಟಿಗೆ(೫೦) ನಿಧನರಾಗಿದ್ದಾರೆ. ಪ್ರಖರ ಹಿಂದುತ್ವವಾದಿ,ರಾ.ಸ್ವ.ಸAಘದ ವಿವಿಧ ಜವಾಭ್ದಾರಿಗಳನ್ನು ನಿರ್ವಹಿಸಿದ್ದ ಇವರು ಕ್ಯಾಂಪ್ಕೋ ಸಂಸ್ಥೆಯಲ್ಲಿ ಉಧ್ಯೋಗಿಯಾಗಿದ್ದರು
..ಕೆಲ ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಮೃತರು ತಂದೆ,ತಾಯಿ,ಸಹೋದರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸೂÃಮವಾರ ರಾತ್ರಿ ಪಟ್ಟಣದ ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಮೈದಾನ ದಲ್ಲಿ ಸಾರ್ವಜನಿಕರಿಗೆ ಅವರ ಪಾರ್ಥಿವ ಶರೀರ ದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ವಾಕರರಾಸಂಸ್ಥೆಯ ಅಧ್ಯಕ್ಷ ವಿ ಎಸ್ ಪಾಟೀಲ, ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಅವರ ಅಂತಿಮ ದರ್ಶನ್ ಪಡೆದು ನಂತರ ಸಂತಾಪ ಸೂಚಿಸಿದ ಅವರು
ಕಳೆದ ಮೂರ್ನಾಲ್ಕು ದಶಕದಿಂದ ಸಂಘ ಪರಿವಾರದ ವಿವಿಧ ಕ್ಷೇತ್ರದಲ್ಲಿ ಹಾಗೂ ವಿದ್ಯಾರ್ಥಿ ಪರಿಷತ್,ಹಿಂದೂ ಜಾಗರಣ ವೇದಿಕೆ,ಭಜರಂಗದಳ,ವಿ.ಹಿA.ಪರಿಷತ್ ಸೇರಿದಂತೆ ವಿವಿಧ ಹಿಂದೂ ಸಂಘಟನೆಯಲ್ಲಿ ಸಕ್ರೀಯವಾಗಿ ಕೆಲಸ ಮಾಡಿದ್ದರು.ಅಯೋದ್ಯೆ ರಾಮಜನ್ಮ ಭೂಮಿ ರಾಮಮಂದಿರ ನಿರ್ಮಾಣದ ಕರಸೇವೆಯಲ್ಲಿ ಭಾಗವಹಿಸಿದ್ದರು
ಪ್ರಖರಹಿಂದುತ್ವವಾದಿ,ರಾ.ಸ್ವ.ಸAಘದ ವಿವಿಧ ಜವಾಭ್ದಾರಿಗಳನ್ನು ನಿರ್ವಹಿಸಿ ತನ್ನ ಬದುಕಿನ ಬಹುಸಮಯವನ್ನು ಸಮಾಜಕ್ಕಾಗಿಯೇ ಮುಡಿಪಾಗಿಟ್ಟಿದ್ದ ಸತೀಶ್ ಕಟ್ಟಿಗೆ ಅವರು ಅಕಾಲಿಕ ನಿಧನರಾಗಿದ್ದು ಅತೀವ ಅಘಾತವಾಗಿದೆ ಎಂದು ದುಃಖ ವ್ಯಕ್ತಪಡಿಸಿದರು. ಈಸಂದರ್ಭದಲ್ಲಿ ಮೌನಾಚಾರಣೆ ಹಾಗೂ ಅವರ ಒಡನಾಡಿಗಳು ನುಡಿನಮನ ಮೂಲಕ ಆರ್ ಎಸ್ ಎಸ್ ಗೀತೆಯನ್ನು ಹಾಡಿ ಅಂತಿಮ ವಿದಾಯ ಸಲ್ಲಿಸಿದರು.ಬಿಜೆಪಿ, ಆರ್ ಎಸ್ ಎಸ್,ಹಿಂದೂ ಸಂಘಟನೆ ಪ್ರಮುಖರು, ಸಾರ್ವಜನಿಕರು ಅಪಾರ ಸಂಖ್ಯೆ ಯಲ್ಲಿ ಆಗಮಿಸಿ ಅವರ ಅಂತಿಮ ದರ್ಶನ್ ಪಡೆದರು.ನಂತರ ಅವರ ಸ್ವಗ್ರಾಮ ಕುಂಬ್ರಾಳದಲ್ಲಿ ಅಂತ್ಯಕ್ರಿಯೆ ನೇರವೇರಿಸಿದರು.
Leave a Comment