ಯಲ್ಲಾಪುರ : ಪಟ್ಟಣದ ಐ.ಬಿ. ರಸ್ತೆಯ ಬಸವೇಶ್ವರ ದೇವಸ್ಥಾನದ ಪಕ್ಕದ ಜಾಗದಲ್ಲಿ ಪಟ್ಟಣ ಪಂಚಾಯತ ವತಿಯಿಂದ 20 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ಹಾಗೂ 5 ಲಕ್ಷ ವೆಚ್ಚದಲ್ಲಿ ಬಸವೇಶ್ವರ ವೃತ್ತದಲ್ಲಿ ಕಾರಂಜಿ ನಿರ್ಮಿಸಲು ಸಿದ್ಧತೆ ನಡೆದಿದೆ.ಸ್ಥಳಕ್ಕೆಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಹಿಳೆಯರಿಗೆ, ಪುರುಷರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ಹಾಗೂ 2 ಬಾತ್‌ರೂಮ್ ಸೇರಿದ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗುವುದು. ಪ್ರಸ್ತುತ ಇರುವ ಗೂಡ್ಸ್ ರಿಕ್ಷಾ ನಿಲ್ದಾಣವನ್ನು ಬೇರೆಡೆ ಸ್ಥಳಾಂತರಿಸಲಾಗುವುದು.
ಮುಂದಿನ ಸಭೆಯಲ್ಲಿ ತೀರ್ಮಾನಿಸಿ ನಿಲ್ದಾಣವನ್ನು ನಿರ್ಮಿಸಿಕೊಡಲಾಗುವುದು ಎಂದರು.
ಪ.ಪಂ. ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ,ಸದಸ್ಯ ಸತೀಶ ನಾಯ್ಕ,ಇಂಜಿನಿಯರ್‌ಗಳಾದ ಹೇಮಚಂದ್ರ ನಾಯ್ಕ ಮತ್ತು ಶಫಿಯಾನ ಬ್ಯಾರಿ, ಗುತ್ತಿಗೆದಾರ ನಿರಂಜನ ಪಾಟಣಕರ್ ಮತ್ತು ಅಭಿಯಂತರ ಸಹಾಯಕ ಸಂತೋಷ ಶೇಟ್ ಇದ್ದರು.
Leave a Comment