ಯಲ್ಲಾಪುರ :
ಪಟ್ಟಣದ ಎ.ಪಿ.ಎಮ್.ಸಿ. ರೈತ ಸಭಾಭವನದಲ್ಲಿ ವಿದ್ಯುತ್ ಮಹೋತ್ಸವ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ .ಉದ್ಘಾಟಿಸಿದರು ಪಟ್ಟಣದ ಎ.ಪಿ.ಎಮ್.ಸಿ. ರೈತ ಸಭಾಭವನದಲ್ಲಿ ಸೋಮವಾರ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ “ಉಜ್ವಲ ಭಾರತ ಉಜ್ವಲ ಭವಿಷ್ಯ” ಶೀರ್ಷಿಕೆಯಡಿ, ವಿದ್ಯುತ್ ಮಹೋತ್ಸವ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ .ಉದ್ಘಾಟಿಸಿ ಮಾತನಾಡಿ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ತರವಾದ ತ್ಯಾಗವನ್ನು ಮಾಡಿರುವ ಜಿಲ್ಲೆ ನಮ್ಮದಾಗಿದೆ. ರಾಜ್ಯದ ವಿದ್ಯುತ್ ದಣಿವನ್ನು ನೀಗಿಸಿದ ಜಿಲ್ಲೆಯ ಪ್ರತಿ ಕಡೆಯ ಮನೆಯವರೆಗೂವಿದ್ಯುತ್‌ತಲುಪುವಂತಾಗಬೇಕುಉಳಿದೆಲ್ಲ ಇಲಾಖೆಗಳಂತೆ, ಇಂಧನ ಇಲಾಖೆಯಲ್ಲಿಯೂ ಸಹ ಬೃಹತ್ ಪ್ರಮಾಣದ ಅಭಿವೃದ್ದಿ ಕಾರ್ಯಗಳಾಗುತ್ತಿದ್ದರೂ, ಅವುಗಳ ಕುರಿತು ಮಾಹಿತಿ ಸಾಮಾನ್ಯ ಜನರನ್ನು ತಲುಪುವಲ್ಲಿ ವಿಫಲವಾಗುತ್ತಿದೆ ಎಂದರು.
ರಾಜ್ಯದ ಬೇಡಿಕೆ ಶೇ.22 ರಷ್ಟು ವಿದ್ಯುತ್‌ನ್ನು ನಮ್ಮ ಜಿಲ್ಲೆಯಲ್ಲಿ ಉತ್ಪಾದಿಸಲಾಗುತ್ತಿದ್ದು, ಕೇವಲ ಶೇ.1 ರಷ್ಟನ್ನು ನಾವು ಬಳಕೆ ಮಾಡುತ್ತಿದ್ದೇವೆ. ಹೀಗಾಗಿ ನಮ್ಮ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಬೆಳಕು ಯೋಜನೆಯಡಿ 9389 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದರು.
- ಹೆಸ್ಕಾಂ ಶಿರಸಿ ವೃತ್ತದ ಅಧೀಕ್ಷಕ ಇಂಜಿನಿಯರ್ ದೀಪಕ ಕಾಮತ್, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ,ವಿಧಾನಪರಿಷತ ಸದಸ್ಯ ಶಾಂತಾರಾಮ ಸಿದ್ದಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುನಂದಾ ದಾಸ್ , ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ್,ಗ್ರಾಂಪಂ ಅಧ್ಯಕ್ಷರು,ಮುಂತಾದವರು ಉಪಸ್ಥಿತರಿದ್ದರು. ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವಿನೋದ ಪೇಟ್ಕರ್ ಸ್ವಾಗತಿಸಿ, ನಿರ್ವಹಿಸಿದರು. ನೇತ್ರಾ ಪಾಟೀಲ್ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯುದೀಕರಣದ ಕುರಿತಾದ ಕಿರು ಚಿತ್ರ, ಹಾಗೂ ಫಲಾನುಭವಿಗಳ ಅನಿಸಿಕೆಯನ್ನು ಪ್ರದರ್ಶಿಸಲಾಯಿತು. ಜಯಕುಮಾರ ಹಾಗೂ ತಂಡದಿಂದ ಕಿರು ನಾಟಕ ಪ್ರದರ್ಶನ ನಡೆಯಿತು.
Leave a Comment