ಯಲ್ಲಾಪುರ : ಸಸ್ಯಗಳನ್ನು ಬೆಳೆಸುವುದರಿಂದ ಆನಂದ ಸಿಗುತ್ತದೆ. ಮನಸ್ಸಿಗೆ ನಿರಾಳ ಎನಿಸುತ್ತದೆ. ಎಲ್ಲರು ಹಸಿರನ್ನು ಬೆಳೆಸಿ, ಉಸಿರನ್ನು ಉಳಿಸುವ ಪ್ರಯತ್ನ ಮಾಡೊಣ ಎಂದು ಶ್ರೀಮಾತಾ ಕಂಪನಿಯ ಅಧ್ಯಕ್ಷ ಶ್ರೀಪಾದ ಭಟ್ಟ ಹೇಳಿದರು.
ಅವರು ಶನಿವಾರ ಪಟ್ಟಣದ ಶ್ರೀಮಾತಾ ಕಂಪನಿಯ ಆವಾರದಲ್ಲಿ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ ಮತ್ತು ಮಾತೃ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿದ್ದ ಸಸ್ಯ ಶ್ರಾವಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಾಜ್ಯ ವಿಕೇಂದ್ರಿಕರಣ ಮತ್ತು ಪಂಚಾಯತ್ ರಾಜ್ಯ ಸಮೀತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ ಪ್ರಕೃತಿ ಮತ್ತು ನಮ್ಮೆಲ್ಲರ ಬದುಕು ಶ್ರಾವಣಕ್ಕಾಗಿ ಕಾಯುತ್ತಿರುತ್ತದೆ. ಧಾರ್ಮಿಕವಾಗಿಯೂ ಪವಿತ್ರವಾದ ತಿಂಗಳಿದು, ಮಹಿಳೆಯರು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಉಳಿದವರಿಗೂ ಪ್ರೇರಣೆಯಾಗಬೇಕು ಎಂದು ಹೇಳಿದರು.
ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದ ಸದಸ್ಯೆ ಮುಕ್ತಾ ಶಂಕರ ಮಾತನಾಡಿ ಸಸ್ಯಕ್ಕೂ, ಶ್ರಾವಣಕ್ಕೂ, ಮಹಿಳೆಗೂ ಅವಿನಾಭಾವ ಸಂಬAಧ. ಮಕ್ಕಳನ್ನು ಬೆಳೆಸುವಂತೆ ಗಿಡಗಳನ್ನು ಬೆಳೆಸುತ್ತಾ ತನ್ನೆಲ್ಲ ನೋವುಗಳನ್ನು ಮರೆಯುವವಳು ಮಹಿಳೆ. ಮಾನಸಿವಾಗಿ ನೆಮ್ಮದಿಯನ್ನು ನೀಡುವ ಇಂತಹ ಹವ್ಯಾಸಗಳಲ್ಲಿ ಹೆಚ್ಚುಹೆಚ್ಚು ತೊಡಗಿಕೊಳ್ಳಬೇಕು. ಸಸ್ಯಗಳನ್ನು ಬೆಳೆಸಿ ಮಾರಾಟವನ್ನು ಮಾಡುವ ಮೂಲಕ ಆರ್ಥಿಕ ಸ್ವಾವಲಂಭನೆಯ ಕುರಿತು ಯೋಚಿಸುವಂತಾಗಲಿ. ಆ ನಿಟ್ಟಿನಲ್ಲಿ ಸನ್ಮಾನಿತರಾದ ಜಯಲಕ್ಷಿö್ಮÃ ಹೆಗಡೆಯವರು ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಗ್ರಾಮೀಣ ಮಹಿಳೆಯರಿಗೆ ಆದರ್ಶರಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ಜಯಲಕ್ಷಿö್ಮÃ ಹೆಗಡೆ ಹೆಡದಬೈಲ್ ಇವರನ್ನು ಸಂಘಟನೆಯ ಪರವಾಗಿ ಸನ್ಮಾನಿಸಲಾಯಿತು.
ಸವಿತಾ ಭಟ್ಟ ಹೂ, ಗಿಡಗಳನ್ನು ಬೆಳೆಸುವ ಕುರಿತು ಮಾರ್ಗದರ್ಶನ ನೀಡಿದರು. ಉಷಾ ಗಾಂವ್ಕರ ಮತ್ತು ಮನೋರಮಾ ಜೋಷಿ ಸಾಂದರ್ಭಿಕವಾಗಿ ಮಾತನಾಡಿದರು.
ಮಾತೆಯರ ಭಗವದ್ಗೀತಾ ಶ್ಲೋಕ ಪಠಣದ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಗಾಯತ್ರಿ ಬೋಳಗುಡ್ಡೆ ನಿರ್ವಹಿಸಿದರು, ಸಂಧ್ಯಾ ಕೊಂಡದಕುಳಿ ಸ್ವಾಗತಿಸಿದರು, ಅಧ್ಯಕ್ಷೆ ಜಾಹ್ನವಿ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಆಶಾ ಪಟೇಲ ಸನ್ಮಾನ ಪತ್ರ ವಾಚಿಸಿದರು. ರಮಾ ದೀಕ್ಷಿತ್ ವಂದಿಸಿದರು.
ಈ ಸಂದರ್ಭದಲ್ಲಿ ನಡೆದ ಹೂ ಬೊಕ್ಕೆ ಸ್ಪರ್ಧೆಯಲ್ಲಿ ಪ್ರೇಮಾ ಹೆಗ್ಗಾರ, ವೀಣಾ ಅರೆಗುಳಿ, ಶಕುಂತಲಾ ಜೋಷಿ ಅನುಕ್ರಮ ಸ್ಥಾನ ಪಡೆದರು.
ವ್ಯವಸ್ಥಿತ ಮಳಿಗೆಗಳ ಸ್ಪರ್ಧೆಯಲ್ಲಿ ದಾಸವಾಳ'ದ ಒಡತಿ ಸಂಧ್ಯಾ ಹೆಗಡೆ ಪ್ರಥಮ,
ನೀಲಾಂಭರಿ’ಯ ಒಡತಿ ಭವಾನಿ ಭಟ್ಟ ದ್ವಿತಿಯ, `ಸೇವಂತಿಗೆ’ಯ ಒಡತಿ ಗೀತಾ ಭಟ್ಟ ತ್ರತೀಯ ಸ್ಥಾನ ಪಡೆದರು. ಗೀತಾ ಭಟ್ಟ ಕೊಡ್ಲಗದ್ದೆ, ನಿರ್ಮಲಾ ಹೆಗಡೆ, ಸುಭಾಷ ಹೆಗಡೆ ನಿರ್ಣಾಯಕರಾಗಿದ್ದರು.
Leave a Comment