ಯಲ್ಲಾಪುರ :ಪಟ್ಟಣದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ , ಮಕ್ಕಳ ಸಾಧನೆ ಯಲ್ಲಾಪುರ :ಪಟ್ಟಣದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ 14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟ ಕಾಳಮ್ಮ ನಗರ ಕ್ರೀಡಾಂಗಣ ದಲ್ಲಿ ನಡೆಯಿತು.
ಬಾಲಕರ ವಿಭಾಗದಲ್ಲಿ ತರುಣ ಕಾಂಬ್ಳೆ 100 ಮೀಟರ್ ಓಟ 200ಮೀ ಓಟ ಹಾಗೂ ರಿಲೇ ಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಧೂಳು ಕೊಕರೆ 600 ಮೀ ಓಟದಲ್ಲಿ ತೃತೀಯ, ಚಕ್ರ ಎಸೆತದಲ್ಲಿ ಹಾಗೂ ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ.
ಲಿಖಿತ್ ನಾಯಕ 100 ಮೀಟರ್ ಓಟದಲ್ಲಿ ತೃತೀಯ ಹಾಗೂ ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ.
ನಾಗರಾಜ ಜ್ಯೋತಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು, ಮನೋಜ್ ಮತ್ತು ಸಂಗಡಿಗರು ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಬಾಲಕರು ಕಬ್ಬಡ್ಡಿಯಲ್ಲಿ ದ್ವಿತೀಯ, ಕೋಕೋ ಮತ್ತು ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದ ರಿಲೆಯಲ್ಲಿ ಸಾನಿಕಾ ಮಡಿವಾಳ ಮತ್ತು ಸಂಗಡಿಗರು ತೃತೀಯ ಸ್ಥಾನವನ್ನು ಹಾಗೂ ಬಾಲಕಿಯರ ಕಬ್ಬಡ್ಡಿಯಲ್ಲಿ ಪ್ರಥಮ ಮತ್ತು ಖೋಖೋ ದಲ್ಲಿ ದ್ವಿತೀಯ ಸ್ಥಾನವನ್ನು , ಶಾರದಾ ಭೋವಿ ವಡ್ಡರ ಚಕ್ರ ಎಸೆತದಲ್ಲಿ ಪ್ರಥಮ, ಸ್ಥಾನವನ್ನು ಹಾಗೂ ಪ್ರತಿಕಾ ಪಟಗಾರ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ದೀಪಾ ಗುಂಡು ಎಸೆತದಲ್ಲಿ ತೃತಿಯ ತೃತೀಯ ಸ್ಥಾನವನ್ನು ಪಡೆದು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಪ್ರಾಂಶುಪಾಲಸಂಜಯ ನಾಯಕ, ನಿಲಯ ಪಾಲಕ ಪ್ರವೀಣಕುಮಾರ ಎ, ದೈಹಿಕ ಶಿಕ್ಷಣ ಶಿಕ್ಷಕಿ ಯೋಗೀತಾ ನಾಯಕ, ಹಾಗೂ ವಸತಿ ಶಾಲೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು, ಪಾಲಕರು ಅಭಿನಂದಿಸಿದ್ದಾರೆ.
Leave a Comment