ಕಾರವಾರ: ಕಟ್ಟಡ ನಿರ್ಮಾಣಕ್ಕೆ ಬಳಸುವ ಸಿಮೆಂಟ್ಗೆ ಪರ್ಯಾಯವಾಗಿ ಗ್ರೀನ್ ಸಿಮೆಂಟ್ ಆನ್ವೇಷಣೆ ಮಾಡಿರುವ ಕಾರವಾರದಸರ್ಕಾರಿ ಎಂಜಿನಿಯರಿAಗ್ಕಾಲೇಜುವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಎಕ್ಸಿಬಿಶನ್ನಲ್ಲಿ ಪ್ರಥಮ ಬಹುಮಾನ ದೊರೆತಿದೆ.
ತಾಲೂಕಿನ ಮಾಜಾಳ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನ ಸಿವಿಲ್ ಎಂಜಿನಿಯರಿAಗ್ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪೃಥ್ವಿರಾಜ್ ಜೈನ್, ಕಾರ್ತಿಕ್ ಸ್ಟಾಮಿ, ದರ್ಶನ್ ಜೈನ್, ಅಮೂಲ್ಯ ಅವರು ಉಪನ್ಯಾಸಕ ಮಿಥೇಶಕುಮಾರ್ ಅವರ ಮಾರ್ಗದರ್ಶನದಲ್ಲಿ ಸತತ ಅಧ್ಯಯನ ನಡೆಸಿ ಸಿಮೆಂಟ್ಗೆ ಪರ್ಯಾಯವಾಗಿ ಗಿನ್ ಸಿಮೆಂಟ್ ಕಂಡುಹಿಡಿದಿದ್ದಾರೆ. ಈ ಗೀನ್ ಸಿಮೆಂಟ್ನಿAದ ತಯಾರಿಸಿದ ಪೇವರ್ ಬ್ಲಾಕ್ಗಳನ್ನು ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ರಾಜ್ಯ ಮಟ್ಟದ ಎಂಜಿನಿಯರಿAಗ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಎಕ್ಸಿಬಿಶನ್ನಲ್ಲಿ ಪ್ರಸ್ತುತಪಡಿಸಿದ್ದಾರೆ. 110 ಕಾಲೇಜುಗಳಿ0ದ 8 ಸೆಕ್ಟರ್ಗಳಲ್ಲಿ ಪ್ರದರ್ಶಿಸಲ್ಪಟ್ಟ 280 ಪ್ರಾಜೆಕ್ಟ್ಗಳ ಪೈಕಿ ಸಿವಿಲ್ ಎಂಜಿನಿಯರಿAಗ್ ಪ್ರಾಜೆಕ್ಟ್ನಲ್ಲಿ ಕಾರವಾರದ ವಿದ್ಯಾರ್ಥಿಗಳ ಗೀನ್ ಸಿಮೆಂಟ್ ಪ್ರಾಜೆಕ್ಟ್ ಪ್ರಥಮ ಬಹುಮಾನ ಗಳಿಸಿಕೊಂಡಿದೆ.
ಇAಡಸ್ಟ್ರಿಯಲ್ ವೇಸ್ಟ್ಗಳಾದ ಥರ್ಮಲ್ ಪವರ್ ಪ್ಲಾಂಟ್ನ ವೇಸ್ಟ್, ಮೆಟಿರಿಯಲ್ ಪ್ಲೆಟ್ ಮತ್ತು ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಹೊರಬರುವ ವೇಸ್ಟ್ ಮೆಟಿರಿಯಲ್ ಜಿಜೆಬಿಎಸ್ ಅನ್ನು ಬಳಸಿಕೊಂಡು ಸಿಮೆಂಟ್ಗೆ ಪಾರ್ಯಾಯವಾಗಿ ಅನ್ವೇಷಿಸಲಾಗಿದೆ. ಪ್ರಸ್ತುತ ನಿರ್ಮಾಣ ಕಾಮಗಾರಿಗಳಿಗೆ, ಸಿಮೆಂಟ್ ಬ್ಲಾಕ್ ಅಥವಾ ಕಾಂಕ್ರೀಟ್ ಬ್ಲಾಕ್ಗಳ ನಿರ್ಮಾಣ ಕಾಮಗಾರಿಗಳಲ್ಲಿ ಸಿಮೆಂಟ್ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಆದರೆ ಈ ಸಿಮೆಂಟ್ ಉತ್ಪಾದನೆಯ ವೇಳೆ ಪರಿಸರಕ್ಕೆ ಹಾನಿಕಾರಕವಾಗಿರುವ ಡೈಆಕ್ಸೆಡ್ ಹೆಚ್ಚಾಗಿ ಬಿಡುಗಡೆಯಾಗುತ್ತಿದ್ದು, ಇದು ಮುಂಬರುವ ಪೀಳಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಅನ್ವೇಷಣೆ ಮಾಡಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಕಾರವಾರ ಇಂಡಸ್ಟ್ರಿಯಲ್ ವೇಸ್ಟ್ಗಳನ್ನು ಕೃಷಿ ಭೂಮಿಯಲ್ಲಿ ವಿಲೇವಾರಿ ಮಾಡುತ್ತಿದ್ದು, ಇದರಿಂದಾಗಿ ಕೃಷಿ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಆದರೆ ಅದೇ ನಿರುಪಯುಕ್ತ ವಸ್ತುಗಳನ್ನು ನಾವು ಕಾಂಕ್ರೀಟ್ನAತೆಯೂ ಬಳಸಬಹುದಾಗಿದೆ. ಇದರಿಂದ ಪರಿಸರಕ್ಕೂ ಹಾನಿ ಇಲ್ಲ ಎನ್ನುತ್ತಾರೆ ಈ ಪ್ರಾಜೆಕ್ಟ್ ಸಿದ್ಧಪಡಿಸಿರೋ ವಿದ್ಯಾರ್ಥಿ ಕಾರ್ತಿಕ್ ಸ್ವಾಮಿ.
ಈಗಾಗಲೇ ಈ ಬಗ್ಗೆ ಬಿಬಿಎಂಪಿ ಕೂಡ ಆಸಕ್ತಿ ವಹಿಸಿ ಪ್ರಾಜೆಕ್ಟ್ ವರದಿ ಪಡೆದಿದೆ. ಮುಂದಿನ ದಿನಗಳಲ್ಲಿ ಪರಿಸರಕ್ಕೆ ಹಾನಿಕಾರಕವಾದ ಸಿಮೆಂಟ್ಗೆ ಪರ್ಯಾಯವಾಗಿ ಈ ಗಿನ್ ಸಿಮೆಂಟ್ಗಳ ಉತ್ಪಾದನೆ ಹೆಚ್ಚಾದಲ್ಲಿ ಮುಂದಿನ ಪೀಳಿಗೆಗೂ ಅನುಕೂಲವಾಗಿದೆ.
ಗ್ರೀನ್ ಸಿಮೆಂಟ್ ಅನ್ವೇಷಿಸಿದ ಕಾರವಾರ ಸರ್ಕಾರಿ ಎಂಜಿನಿಯರಿAಗ್ ಕಾಲೇಜು ವಿದ್ಯಾರ್ಥಿಗಳು.
Leave a Comment