ಸಿದ್ದಾಪುರ: ಇಲ್ಲಿನ ನಿಸರ್ಗ ಪೆಟ್ರೋಲ್ ಬಂಕ್ನಲ್ಲಿ ಭಾನುವಾರ ಸಂಜೆ ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಸಿಬ್ಬಂದಿಗಳನ್ನು ಯಾಮಾರಿಸಿ ರೂ .41 ಸಾವಿರ ನಗದು ಲಪಟಾಯಿಸಿಕೊಂಡು ಹೋದ ಘಟನೆ ನಡೆದಿದೆ.
ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯು ವಿದ್ಯಾವಂತ ಮತ್ತು ಇದೆ ಸುಸಂಸ್ಕೃತನಂತೆ ವರ್ತಿಸುತ್ತಿದ್ದ. ಪಂಪ ಅಟೆಂಡರ್ನ ಆತ್ಮೀಯವಾಗಿ ವರ್ತಿಸಿ ಅವನ ಡ್ರಾವರ್ನಿಂದ ಕೆಲವಷ್ಟು ಹಣ ಎತ್ತಿದ್ದಾನೆ. ಆನಂತರ ಮ್ಯಾನೇಜರ್ ಕೌಂಟರ್ಗೆ ಬಂದು 2000 ನೋಟು ಇದೆಯಾ ಎಂದು ವಿಚಾರಿಸಿದ್ದಾನೆ. ಮ್ಯಾನೇಜರ್ ಎಡ್ವರ್ಡ್ ಹಣದ ಡ್ರಾವರ್ ತೆಗೆದು, ಕೇವಲ ಒಂದೇ ನೋಟು ಎಂದು ತೋರಿಸಿದ್ದಾನೆ.
ಈ ವೇಳೆ ಆ ವ್ಯಕ್ತಿ, ನೋಟು ಪರಿಶೀಲಿಸಿ ನೋಡಿದಂತೆ ನಟಿಸುತ್ತಾ,ಡ್ರಾವರ್ ನಲ್ಲಿ ಮತ್ತೆ ನೋಟು ಇರಬಹುದು ಎನ್ನುತ್ತಾ ಸಲಿಗೆಯಿಂದ ತಾನೇ 500ರ ನೋಟುಗಳ ಕಟ್ಟುಗಳನ್ನು ತಗೆದು ಹುಡುಕಿದಂತೆ ಮಾಡುತ್ತಾ ರಬ್ಬರ್ ತೆಗೆದು ಎಲ್ಲಾ ನೋಟುಗಳನ್ನು ಸೇರಿಸಿದ್ದಾನೆ. ಮ್ಯಾನೇಜರ್ ಹಣ ಜೊತೆ
ಕಸಿದುಕೊಳ್ಳುವಲ್ಲಿ ಮುಂದಾದಾಗ ಹಣದ ಪೈಕಿ ಕೆಳಭಾಗದಿಂದ ಕೆಲವು ನೋಟುಗಳನ್ನು ಮಡಿಸಿ ಕೈ ಬದಲಾಯಿಸಿ ಕೆಳಗಿಟ್ಟುಕೊಂಡಿದ್ದ ತನ್ನ ಪರ್ಸ್ನೊಂದಿಗೆ ಸೇರಿಸಿ ಜೇಬಿಗೆ ಸೇರಿಸಿಕೊಂಡು, ನಂತರ ಪರಾರಿಯಾಗಿದ್ದಾನೆ. ಕಳ್ಳನ ಈ ಕೈಚಳಕ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬಗ್ಗೆ ಈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Leave a Comment