ಯಲ್ಲಾಪುರ : ತಾಲೂಕಿನಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿ ಯಿಂದ ಆಚರಿಸುವದರೊಂದಿಗೆ ರಾಷ್ಟ್ರ ಭಕ್ತಿ ಯನ್ನು ಮೆರೆದು ಮಾದರಿಯಾಗಿದ್ದಾರೆ. ತಾಲೂಕಿನ ಕಿರವತ್ತಿಯ ಜಯಂತಿ ನಗರದಲ್ಲಿ ಮೊಹರಂ ದೇವರ ತಾಬೂತ್ ನ್ನು ರಾಷ್ಟ್ರ ಧ್ವಜ ದ ಮಾದರಿಯಲ್ಲಿ ಹೂವಿನ ಅಲಂಕಾರ ಮಾಡಿದ್ದು ವಿಶೇಷ ವಾಗಿದೆ.
ಕೇಸರಿ ಗೆ ಚಂಡು ಹೂವು, ಬಿಳಿ ಗೆ ಮಲ್ಲಿಗೆ, ಹಸಿರು ಗೆ ಎಲೆಗಳನ್ನು ಬಳಸಿ ಬಣ್ಣಗಳರಂಗನ್ನು ನೈಸರ್ಗಿಕವಾಗಿ ಯೇ ನೀಡಿದ್ದು ಮಧ್ಯದಲ್ಲಿ ಅಶೋಕ ಚಕ್ರವನ್ನು ಅಂಟಿಸಲಾಗಿದೆ. ಕಿರವತ್ತಿ ಯ ಗ್ರಾ ಪಂ ಸದಸ್ಯ ರೆಹಮಾತ್ ಅಬ್ಬಿಗೇರಿ ನೇತೃತ್ವದಲ್ಲಿ ಅಲಂಕಾರ ಮಾಡಲಾಗಿದೆ.
ಈರೀತಿ ಅಜಾದಿ ಕಾ ಅಮೃತ ಮಹೋತ್ಸವ ವರ್ಷ ದ ಮೊಹರಂ ಹಬ್ಬವನ್ನು ರಾಷ್ಟ್ರೀಯ ಭಾವೈಕ್ಯತೆ ಯಿಂದ ಆಚರಿಸುತ್ತಿರುವ ದಕ್ಕೆ ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ವಿಲ್ಸ್ ನ ಫರ್ನಾಂಡಿಸ್ ಸೇರಿದಂತೆ ಹಲವು ಮುಖಂಡರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿರಾಷ್ಟ್ರ ಧ್ವಜ ದ ಮಾದರಿಯ ತಾಬೂತ್ ನ್ನು ಕಣ್ತುಂಬಿ ಕೊಂಡು ಪ್ರಶಂಸಿದರು.
Leave a Comment