ಯಲ್ಲಾಪುರ : ತಾಲೂಕಿನ ಕಿರವತ್ತಿಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜಯ ಕರ್ನಾಟಕ ತಾಲ್ಲೂಕಾ ಸಂಘಟನೆ, ತಾಲ್ಲೂಕಾ ಘಟಕ ಮತ್ತ ಗ್ರಾಮೀಣ ಘಟಕದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ದುಷ್ಚಟಗಳಿಂದ ದೂರರಾಗಿ ಭವ್ಯ ಭಾರತ ಸತ್ಪ್ರಜೆಗಳಾಗಿ, ಬೆಳೆಯುವ ಮಕ್ಕಳ ದುಷ್ಚಟಗಳ ವಿರುದ್ಧ ನಮ್ಮದೊಂದು ಸಮರ ಎಂಬ ಶೀರ್ಷಿಕೆಯೊಂದಿಗೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಎಲ್ಲ ಸದಸ್ಯರು, ಊರ ನಾಗರಿಕರು ಘೋಷಣೆಗಳನ್ನು ಕೂಗುತ್ತ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಇದೇ ಸಂದರ್ಬದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆಗೈದ ಅಂಧ ವಿದ್ಯಾರ್ಥಿ ಹುಸೇನ್ನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಸಂಘಟನೆ ತಾಲೂಕಾಧ್ಯಕ್ಷ ವಿಲ್ಸನ್ ಫರ್ನಾಂಡಿಸ್, ತಾ. ಎಸ್ಸಿ-ಎಸ್ಟಿ ಘಟಕ ಚನ್ನಪ್ಪ ಡಿ.ಎಚ್., ಸುಭಾಷ್ ಡಿ.ಎಚ್, ಮೆಹಬೂಬ್, ಮಹಿಳಾ ತಾ. ಅಧ್ಯಕ್ಷೆ ಸುಮಂಗಲಾ ಹನುಮರೆಡ್ಡಿ, ಕಿರವತ್ತಿ ಮ.ಘಟಕದ ಅಧ್ಯಕ್ಷೆ ರುಕ್ಮಿಣಿ ನಾಯ್ಕ, ಶಾಹಿನ್ ಮುಜಾವರ್, ಫಾತಿಮಾ ಹುಸೇನ್ ಕಣವಿ, ಮೌಲಾಲಿ ಪಾಟೀಲ, ಮತ್ತಿತರು ಇದ್ದರು.
Leave a Comment