ಯಲ್ಲಾಪುರ: ಪಟ್ಟಣದ ಬಿಕ್ಕು ಗುಡಿ ಗಾರ ಕಲಾ ಕೇಂದ್ರದಲ್ಲಿ ವಿಶಿಷ್ಟ ಕಾಷ್ಠಶಿಲ್ಪದಿಂದ ನಿರ್ಮಿಸಲಾಗಿರುವ ಬೃಹತ್ ರಥ ಬುಧವಾರ ಹುಬ್ಬಳ್ಳಿಗೆ ತೆರಳಲಿದೆ.ಪಟ್ಟಣದ ಭಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ ಹುಬ್ಬಳ್ಳಿಯ ಕೃಷ್ಣ ಮಠಕ್ಕಾಗಿ 15 ಅಡಿ ಎತ್ತರದ ರಥವನ್ನು ನಿರ್ಮಿಸಲಾಗಿದ್ದು, ಗುಡಿಗಾರ ಸಹೋದರ ರು ಪೂಜೆ ಸಲ್ಲಿಸಿ ಹುಬ್ಬಳ್ಳಿಯ ಕೃಷ್ಣ ಮಠಕ್ಕೆ ಕಳುಹಿಸಿಕೊಟ್ಟರು .
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ದಕ್ಷಿಣ ಕನ್ನಡ ದ್ರಾವಿಡ ಸಮಾಜದವರ ಕೃಷ್ಣ ಮಠಕ್ಕಾಗಿ ಈ ರಥವನ್ನು ನಿರ್ಮಿಸಲಾಗಿದೆ.ಕಲಾಕೇಂದ್ರದ ಮುಖ್ಯಸ್ಥರು,ಸಹೋದರರಾದ ಅರುಣ ಗುಡಿಗಾರ ಹಾಗೂ ಸಂತೋಷ ಗುಡಿಗಾರ ನೇತೃತ್ವದಲ್ಲಿ ಅಂದಾಜು 26ರೂ ವೆಚ್ಚ ದಲ್ಲಿ ಎರಡು ತಿಂಗಳ ಕಾಲ 15 ಕುಶಲ ಕಲಾವಿದರು ಸುಂದರ ಕಾಷ್ಟ ಕೆತ್ತನೆ ಯ ರಥ ವನ್ನು ಸಿದ್ಧ ಪಡಿಸಿದ್ದಾರೆ.
ಸುಂದರ ಕೆತ್ತನೆಯ 15ಅಡಿ ಎತ್ತರದ ಈ ರಥ ದ ಹೊರಭಾಗದಲ್ಲಿ ಶ್ರೀಕೃಷ್ಣ ಅವತಾರ ಪ್ರಮುಖ ಸನ್ನಿವೇಶ ದ ಕಥಾ ಹಂದರದ ಕಲಾಕೃತಿಗಳ ಸೂಕ್ಶ್ಮ ಕೆತ್ತನೆಯನ್ನು ಒಳಗೊಂಡಿದ್ದು ಗುಡಿಗಾರರ ಕಲಾ ನೈಪುಣ್ಯ ಕ್ಕೆ ಸಾಕ್ಷಿಯಾಗಿದೆ.
ಹಲವು ದಶಕ ಗಳಿಂದ ದೇಶ ದಲ್ಲಷ್ಟೇ ಅಲ್ಲದೆ ಅಮೇರಿಕಾದ ನ್ಯೂಜೆರ್ಸಿ ಸೇರಿದಂತೆ ವಿದೇಶಗಳಲ್ಲಿಯೂ ಅವರ ಕಲೆಯ ಶ್ರೀಮಂತಿಕೆಯನ್ನು ಕಾಣ ಬಹುದಾಗಿದೆ.
Leave a Comment