ಹೊನ್ನಾವರ : ಇಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅತ್ಯಂತ ಮಾನವೀಯ ಹಾಗು ದಕ್ಷ ಪೊಲೀಸ್ ಅಧಿಕಾರಿ ಎಂದು ಈವರೆಗೂ ಪ್ರಶಂಸಿಸಲ್ಪಡುತ್ತಿದ್ದ ಆನಂದಮೂರ್ತಿಗೆ ಸಿಪಿಐ ಐಎಸ್ಡಿ ಬಡ್ತಿಯೊಂದಿಗೆ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ ( ಐಎಸ್ಡಿ ) ಕ್ಕೆ ವರ್ಗಾಯಿಸಲಾಗಿದೆ .
ಆನಂದಮೂರ್ತಿ ಪಿಎಸ್ಐ ಆಗಿ ಕಾರವಾರ ಠಾಣೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದು , ನಂತರ ಗೋಕರ್ಣ , ಹೊನ್ನಾವರ , ಹಳಿಯಾಳ ನಂತರ ಮತ್ತೆ ಹೊನ್ನಾವರಕ್ಕೆ ಪಿಎಸ್ಐ ಆಗಿ ಪುನಃ ಬಂದವರು . ಪಿಎಸ್ಐ ಆಗಿ ಜನಸಾಮಾನ್ಯರೊಂದಿಗೆ ಹೊಸದಾದ ಮಾನವೀಯ ಸಂಸ್ಕೃತಿ ಬೆಸೆದ ಆನಂದಮೂರ್ತಿಯವರನ್ನು ಯಾರೂ ದೂಷಿಸುವಂಥ ವಾತಾವರಣವೇ ಇರಲಿಲ್ಲ . ಅವರು ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು .
ತನ್ನ ಸಿಬ್ಬಂದಿಗಳಾದ ಪೊಲೀಸ್ ಕಾನಸ್ಟೇಬಲ್ಗಳ ಬಗ್ಗೆ ಕಾಳಜಿ ಹಾಗೂ ಹೊರ ಠಾಣೆಯಿಂದ ಕಾರ್ಯ ನಿಮಿತ್ತ ಆಗಮಿಸಿದ ಪೊಲಿಸರಿಗೆ ಊಟ ಕೊಟ್ಟು ಕಳುಹಿಸುವ ಮನೋಭಾವ ಅವರದ್ದಾಗಿತ್ತು . ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲದ ಆನಂದಮೂರ್ತಿಯವರಿಗೆ ಉತ್ತರ ಕನ್ನಡದ ಜನರೂ ಅವರ ಭಾವನೆಗೆ ಇಷ್ಟವಾದವರಂತಿದ್ದರು.
Leave a Comment