ಯಲ್ಲಾಪುರ: ಲಲಿತ ಅಷ್ಟೋತ್ತರವನ್ನು ಪ್ರತಿನಿತ್ಯ ಪಠಿಸುವದರಿಂದ ದಿವ್ಯಾನುಭೂತಿ ದೊರೆಯುತ್ತದೆ. ಅರಿ಼ಷಿಣ ಕುಂಕುಮ ಕಾರ್ಯಕ್ರಮ ಮೂಲಕ ಅಧ್ಯಾತ್ಮಿಕವನ್ನು ,ನಮ್ಮ ಸಂಸ್ಕೃತಿಯ ಸಕಾರಾÀತ್ಮಕ ಮೌಲ್ಯವನ್ನು ಪಸರಿಸುವ ಕಾರ್ಯವಾಗುತ್ತಿದೆ ಎಂದು ಉಮ್ಮಚಗಿಯ ಸಂಸ್ಕೃತ ವiಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯೆ ಶರಾವತಿ ಭಟ್ಟ ಹೇಳಿದರು.ಅವರು ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್, ವಿಹಿಂಪಮಾತೃಮAಡಳಿ ವತಿಯಿಂದ ಹಮ್ಮಿಕೊಂಡಿದ್ದ ಸಮೂಹಿಕ ಅರಿಷಿಣ ಕುಂಕುಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸ್ವಾತಂತ್ರö್ಯ ಪೂರ್ವದಲ್ಲಿಯೂ ಹೋರಾಟಗಾರರು ಅಧ್ಯಾತ್ಮಿಕತೆಯನ್ನು ಸಂಘಟನೆಗೆ ಬಳಸಿಕೊಳ್ಳುತ್ತಿದ್ದರು
.ಇಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳು ಪ್ರಸ್ತುತವೆನಿಸುತ್ತಿವೆ.ವೇದವೆಂದರೆ ಕೇವಲ ಪೌರೋಹಿತ್ಯಕ್ಕೆ ಸೀಮಿತವಾಗಿರದೇ ವೇದವೆಂದರೆ ಜ್ಞಾನ ಅದನ್ನು ಪಡೆದುಕೊಳ್ಳುವ ಅರ್ಹತೆ ಎಲ್ಲರಿಗೂ ಇರುತ್ತದೆ. ತಾಮಸಿಕ ಭಾವನೆಯಿಂದ ಯಾವದೇ ಫಲ ದೊರೆಯುವದಿಲ್ಲ . ದೇವಿಯ ಆರಾಧನೆಯನ್ನು ಅಧ್ಯಾತ್ಮಕದಡಿಯಲ್ಲಿ ಮಾಡಿದಾಗ ಫಲ ದೊರೆಯುತ್ತದೆ. ಎಂದರು. ವಿದ್ವಾನ ಅನಂತಭಟ್ಟ ಶಿಗೇಪಾಲ ನೇತ್ರತ್ವದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕಮಾರ್ಚನೆ, ಲಲಿತಾ ಅಷ್ಟೋತ್ತರ ಪಠಣ ನಡೆಯಿತು. ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಿ ಎನ ಭಟ್ಟ ಏಕಾನ , ಮಾತೃಮಂಡಳಿ ಅಧ್ಯಕ್ಷೆ ಪುಷ್ಪಾ ಜೋಗಾರಶೆಟ್ಟರ ಮಾತನಾಡಿದರು. ಇದೇ ಸಂದರ್ಭದಲ್ಲಿ ಸೂಲಗಿತ್ತಿ ಶಕುಂತಲಾ ಬೆಟಗೇರಿ ಅವರನ್ನು ಸನ್ಮಾನಿಸಲಾಯಿತು.ಸಭಾ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದೇವಿಗೆ ಸಮಿತಿಯಿಂದ ವಿಶೇಷ ಪೂಜೆ ಉಡಿ ಸಲ್ಲಿಸಲಾಯಿತು. ಶಶಿಕಲಾ ಅಂಬಿಗ ಪ್ರಾರ್ಥಿಸಿದರು. ಕಾರ್ಯದರ್ಶಿ ಶ್ಯಾಮಿಲಿ ಪಾಠಣಕರ ನಿರ್ವಹಿಸಿದರು. ಶೋಭಾ ಹುಲಮನಿ ಸ್ವಾಗತಿಸಿದರು, ವೀಣಾ ಯಲ್ಲಾಪುರಕರ ವಂದಿಸಿದರು. ಹಿರಿಯರಾದ ಗಿರಿಜಾ ಮಾವಳ್ಳಿ ,
ಪ್ರಮುಖರಾದ ರಾಮು ನಾಯ್ಕ, ಧಾತ್ರಿ ಶ್ರೀನಿವಾಸ, ಪ್ರಸಾದ ಹೆಗಡೆ, ಪ್ರದೀಪಯಲ್ಲಾಪುರಕರ ಮುಂತಾದವರು ಇದ್ದರು. ಮುತೈದೆಯರಿಗೆ ಉಡಿ ನೀಡಲಾಯಿತು.
Leave a Comment