ಯಲ್ಲಾಪುರ : ಪಟ್ಟಣದ ಗಾಂಧಿ ಕುಟೀರದಲ್ಲಿ ನಡೆದ ತಾಲೂಕ ಪಂಚಾಯತದ ೨೦೨೧-೨೨ನೇ ಸಾಲಿನ ಜಮಾ ಬಂಧಿ ಸಭೆಯಲ್ಲಿ ವಾದವಿವಾದಕ್ಕೆ ಹೆಚ್ಚಿನ ಸಮಯ ನುಂಗಿ ಹಾಕಿತು. ಸಭೆ ಆರಂಭವಾಗುತ್ತಿದ್ದAತೆ ಕೆಲ ಸಾರ್ವಜನಿಕರು ಮಾತನಾಡಿ, ಜಮಾ ಬಂಧಿ ಸಭೆಯ ಕುರಿತು ನಾಗರಿಕರಿಗೆ ಸಮರ್ಪಕವಾದ ಮಾಹಿತಿ ತಲುಪುತ್ತಿಲ್ಲ. ಈ ಕುರಿತು ಸರಿಯಾದ ಪ್ರಚಾರದ ಅವಶ್ಯಕತೆ ಇದೆ. ಅಷ್ಟೇ ಅಲ್ಲದೇ ಅನೇಕ ಕಡೆ ಇನ್ನೂ ಸಹ ಕೆಲಸಗಳೇ ಆಗಿಲ್ಲ. ಅಂತಹ ಕಡೆಯೂ ಬಿಲ್ ಪಾಸ್ ಮಾಡಲಾಗಿದೆ.
ಇದರ ಬಗ್ಗೆ ನಮಗೆ ಮಾಹಿತಿಯನ್ನು ನೀಡಿ, ಕೆಲಸ ಆಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ಮುಂದಿನ ದಿನಗಳಲ್ಲಿ ಸಭೆಯನ್ನು ಮಾಡುವಂತೆ ಒತ್ತಾಯಿಸಿದರು.
ವಿಶೇಷವಾಗಿ ಆನಗೋಡ, ಮಾವಿನಮನೆ ಪಂಚಾಯತ ವ್ಯಾಪ್ತಿಯಿಂದ ಪ್ರಮುಖರು ಮಾತನಾಡಿ, ವಿಶೇಷ ಅನುದಾನಗಳ ಬಳಕೆ ಸರಿಯಾಗಿ ಆಗಬೇಕಿದೆ. ಬಿಲ್‌ಗಳನ್ನು ಓದುವಾಗ ಅದರಲ್ಲಿ ನಿರ್ಮಿಸಲಾದ ರಸ್ತೆಯ ಉದ್ದ ಅಗಲಗಳನ್ನು ಉಲ್ಲೇಖಿಸಿ ಓದುವಂತೆ ಸೂಚಿಸಿದರು. ಕೆಲಸ ಪೂರ್ಣವಾದ ನಂತರ ಜಾಗದಲ್ಲಿ ಜನರಿಗೆ ಕಾಣುವ ರೀತಿಯಲ್ಲಿ ಯೋಜನೆಯ ಹೆಸರು, ಮೊತ್ತ, ಗುತ್ತಿಗೆದಾರರ ಹೆಸರು ಸೇರಿದಂತೆ ಎಲ್ಲ ಮಾಹಿತಿಯುಳ್ಳ ನಾಮಫಲಕಗಳನ್ನು ಅಳವಡಿಸಬೇಕು. ಈ ಮೂಲಕ ಜನರಿಗೂ ಆಗಿರುವ ಕೆಲಸದ ಮಾಹಿತಿ ದೊರಕಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾರಿ ಬಸವರಾಜು ಮಾತನಾಡಿ, ಎಲ್ಲರ ದೂರುಗಳ ಕುರಿತು ಗಂಭೀರವಾಗಿ ಚರ್ಚಿಸಲಾಗುವುದು. ಸಲಹೆಗಳನ್ನು ಸ್ವೀಕರಿಸಿ ಜಾರಿಗೆ ತರಲಾಗುವುದು. ಅಲ್ಲದೇ ಕಾಮಗಾರಿಗಳು ನಡೆದಿಲ್ಲ ಎನ್ನುವ ಕಡೆ ತಾಂತ್ರಿಕ ಜ್ಞಾನವುಳ್ಳ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿ, ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಮಾತನಾಡಿ
ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಕ್ಕೆ ಪ್ರಸಕ್ತ ಆರ್ಥಿಕ ವರ್ಷ ದಲ್ಲಿ ತಾಪಂ ದಿಂದ ಅನುಷ್ಠಾನ ವಾಗಿರುವ ಕಾಮಗಾರಿ,ಯೋಜನೆ ಗಳ ಮಾಹಿತಿ ಯುಳ್ಳ ನಾಮಫಲಕ ಅಳವಡಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದರು.ಸಭೆಯಲ್ಲಿ ತಾ.ಪಂ. ಆಡಳಿತಾಧಿಕಾರಿ ನಟರಾಜ್ ಟಿ.ಎಚ್.,ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸಭೆಯ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾರಿ ಬಸವರಾಜು, ತಾ.ಪಂ. ಆಡಳಿತಾಧಿಕಾರಿ ನಟರಾಜ್ ಟಿ.ಎಚ್. ಸಭೆಯ ನಂತರ ಅಧಿಕಾರ ಗಳು ಅನಗೋಡ,ಬಿಸಗೋಡ ಗೆ ಭೇಟಿ ನೀಡಿ ಹಾಲಿನ ಡೈರಿಯ ೧ ಲಕ್ಷ ವೆಚ್ಚದ ಕೊಠಡಿಯ ಮುಂದುವರೆದ ಕಾಮಗಾರಿ ಹಾಗೂ ಕೇಸಿನಮನೆಗೆ ಅಂದಾಜು ೨ ಲಕ್ಷ ಮೌಲ್ಯದ ರಸ್ತೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.
Leave a Comment