ಯಲ್ಲಾಪುರ :ಬದುಕಿನ ಚಹರೆಯಲ್ಲಿ ದೋಷಗಳಿರಬಾರದು. ಶಿಕ್ಷಕಿಯಾಗಿ ಕೆಲಸ ಮಾಡುವುದು ನನಗೆ ದೊರೆತ ಭಾಗ್ಯ.ಮಕ್ಕಳಿಗೆ ನೀಡುವ ವಿದ್ಯಾ ದಾನ ಶಾಶ್ವತವಾದ ಪುಣ್ಯ .ಎಂದು ಇಂದಿರಾ ಎಸ್ ಭಟ್ಟ .ಹೇಳಿದರು.
ಅವರು ವಜ್ರಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಅಭಿನಂದನಾ ನುಡಿಗಳನ್ನಾಡಿದ ಡಾ. ಡಿ.ಕೆ.ಗಾಂವ್ಕಾರರವರು
.ಪ್ರಾಮಾಣಿಕವಾದ ನಮ್ಮತನದಲ್ಲಿ
ನಿವೃತ್ತಿ ಎನ್ನುವುದು ವೃತ್ತಿಗೆ ಮಾತ್ರ ಹೊರತು ಸಾಮಾಜಿಕತೆಯ ಸೇವೆಗಲ್ಲಾ. ಸೇವಾ ಜೀವನ ಬದುಕಿನ ಆಳವನ್ನು ತೋರಿಸಿ ಅನುಭವದ ದ್ರವ್ಯವನ್ನೂ ನೀಡುತ್ತದೆ.ಸಮಾಜದ ಒಡನಾಡಿಯಾಗಿರುವ ವ್ಯಕ್ತಿ ಎಲ್ಲಿ ಹೋದರೂ ಸುಖವಾಗಿರಬಲ್ಲ. ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಕಾರ್ಯಕರ್ತ ವಿ ಎನ್ ಭಟ್ಟ.ಜಿ ಎನ್ ಕೋಮಾರ ,ಶಿಕ್ಷಕಿ ಸರಸ್ವತಿ ಭಟ್ಟ,ಜಿ ಎಸ್ ಗಾಂವ್ಕಾರ,, ಶಿಕ್ಷಕಕರ ಸಂಘದ ಪ್ರತಿನಿಧಿ ನಾಗರಾಜ ಹೆಗಡೆ, ಜಿ ಎನ್ ಕೋಮಾರ, ಸುರಕ್ಷಾ ನಾಯ್ಕ ಶಿಕ್ಷಕಿಯರಾದ ಅಂಕಿತಾ ಗೌಡ,ತನುಜಾ ಚಿಚಲಕರ್ ಉಪಸ್ಥಿತರಿದ್ದರು. ಬೀಳ್ಕೊಡುಗೆ
ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷ ಕಾಮೇಶ್ವರ ಭಟ್ಟ ವಹಿಸಿದ್ದರು. ಆರಂಭದಲ್ಲಿ ರಾಧಾ ಭಟ್ಟ ಸ್ವಾಗತಿಸಿದರು. ನಂದಾ ಸರ್ ನಿರ್ವಹಿಸಿದರು.
Leave a Comment