ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಅರ್ಹ ಹಾಗೂ ಆಸಕ್ತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಕರ್ನಾಟಕ ರಸ್ತೆ ಸಾರಿಗೆ ನಿಗಮ
ಹುದ್ದೆಗಳ ಹೆಸರು : ಕುಶಲಕರ್ಮಿ (ಅಟೋ ಮೆಕ್ಯಾನಿಕ್, ಆಟೋ ಬಾಡಿ ಬಿಲ್ಡರ್, ಅಟೋ ವೆಲ್ಡರ್, ಅಟೋ ಪೇಂಟರ್, ಆಟೋ ಎಲೆಕ್ಟಿçಷಿಯನ್,) ತಾಂತ್ರಿಕ ಸಹಾಯಕ, ಸಹಾಯಕ ಸಂಚಾರ ನಿರೀಕ್ಷಕ, ಕ.ರಾ.ಸಾ. ಪೇದೇ ಸಹಾಯಕ ಲೆಕ್ಕಿಗ
ಒಟ್ಟು ಹುದ್ದೆಗಳು : 36
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
ಹುದ್ದೆಗಳ ವಿವರ :
ಕುಶಲಕರ್ಮಿ 19
ವೇತನ ಶ್ರೇಣಿ ರೂ. 13970-20740
ತಾಂತ್ರಿಕ ಸಹಾಯಕ 3
ವೇತನ ಶ್ರೇಣಿ ರೂ. 11640-15700
ಸಹಾಯಕ ಸಂಚಾರ ನಿರೀಕ್ಷಕ 6
ವೇತನ ಶ್ರೇಣಿ ರೂ. 13970-20740
ಕ.ರಾ.ಸಾ. ಪೇದೇ 5+2
ವೇತನ ಶ್ರೇಣಿ ರೂ. 11640-15700
ಸಹಾಯಕ ಲೆಕ್ಕಿಗ 1
ವೇತನ ಶ್ರೇಣಿ ರೂ. 14970-26670
ವಿದ್ಯಾರ್ಹತೆ :
ಕುಶಲಕರ್ಮಿ (ಆಟೋ ಮೆಕ್ಯಾನಿಕ್, ಆಟೋ ಬಾಡಿ ಬಿಲ್ಡರ್, ಅಟೋ ವೆಲ್ಡರ್, ಆಟೋ ಪೇಂಟರ್) – ಹುದ್ದೆಗಳಿಗೆ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿAದ ಮೆಕ್ಯಾನಿಕ್/ಆಟೋಮೊಬೈಲ್/ವೆಲ್ಡಿಂಗ್ ಮತ್ತು ಶೀಟ್ ಮೆಟಲ್ ಟೆಕ್ನಾಲಜಿಯಲ್ಲಿ 3 ವರ್ಷದ ಇಂಜಿನಿಯರಿAಗ್ ಡಿಪ್ಲೋಮಾ ಪಡೆದಿರಬೇಕು. ಚಾಲ್ತಿಯಲ್ಲಿರುವ ಭಾರಿ ಪ್ರಯಾಣಿಕರ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು. ಅಥವಾ ಪರೀಕ್ಷಾರ್ಥ ಅವಧಿ ಮುಗಿಯುವುದರೊಳಗೆ ಹೊಂದತಕ್ಕದು,
ಕುಶಲಕರ್ಮಿ (ಆಟೋ ಎಲೆಕ್ನಿಷಿಯನ್) – ಹುದ್ದೆಗಳಿಗೆ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಎಲೆಕ್ನಿಕಲ್/ ಎಲೆಕ್ನಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ ಮೆಕ್ಯಾಟ್ರಾನಿಕ್ಸ್ ಇಂಜಿನಿಯರಿಂಗ್/ ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿಂಗ್ ನಲ್ಲಿ 3 ವರ್ಷಗಳ ಇಂಜಿನಿಯರಿಂಗ್ ಡಿಪ್ಲೋಮಾ ಪಡೆದಿರಬೇಕು. ಚಾಲ್ತಿಯಲ್ಲಿರುವ ಭಾರಿ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು ಅಥವಾ ಪರೀಕ್ಷಾರ್ಥ ಅವಧಿ ಮುಗಿಯುವುದರೊಳಗೆ ಹೊಂದತಕ್ಕದ್ದು.
ತಾಂತ್ರಿಕ ಸಹಾಯಕ – ಹುದ್ದೆಗಳಿಗೆ ಅಭ್ಯರ್ಥಿಗಳು ಪ್ರೌಢ ಶಿಕ್ಷಣ ಮಂಡಳಿಯಿಂದ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ನಂತರ ತಾಂತ್ರಿಕ ಮಂಡಳಿ ಅಥವಾ ಸರ್ಕಾರದಿಂದ ಅಂಗೀಕೃತವಾದ ಸಂಸ್ಥೆಯಲ್ಲಿ ಐ.ಟಿ.ಸಿ/ಐ.ಟಿ.ಐ/ ಎನ್.ಎ.ಸಿ.ಯಲ್ಲಿ ಮೆಕ್ಯಾನಿಕ್ (ಮೋಟಾರ್ ವೆಹಿಕಲ್) ಹಾಗೂ ಇನ್ನಿತರ ವೃತ್ತಿಗಳಲ್ಲಿ ಉತ್ತೀರ್ಣರಾಗಿರಬೇಕು. ಪರೀಕ್ಷಾರ್ಥ ಸೇವೆ ಪೂರ್ಣಗೊಳ್ಳುವುದರೊಳಗೆ ಲಘು ಮೋಟಾರು ವಾಹನ ಚಾಲನಾ ಪರವಾನಿಗೆಯನ್ನು ಹೊಂದತಕ್ಕದ್ದು.
ಸಹಾಯಕ ಸಂಚಾರ ನಿರೀಕ್ಷಕ – ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿ ಪೂರ್ವ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
ಕ.ರಾ.ಸಾ. ಪೇದೆ – ಹುದ್ದೆಗಳಿಗೆ ಅಭ್ಯರ್ಥಿಗಳು ಪಿಯುಸಿ ಉತ್ತೀರ್ಣರಾಗಿರಬೇಕು ಅಥವಾ ಮಾಜಿ ಸೈನಿಕರಾಗಿದ್ದು, 2ನೇ ದರ್ಜೆ ಆರ್ಮಿ ಸರ್ಟಿಫಿಕೇಟ್ ಅಥವಾ ನೌಕಾದಳ/ ವಾಯುದಳದಲ್ಲಿ ತತ್ಸಮಾನ ದರ್ಜೆಯ ಸರ್ಟಿಫಿಕೇಟ್ ಹೊಂದಿರಬೇಕು.
ಸಹಾಯಕ ಲೆಕ್ಕಿಗ – ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೂರು ವರ್ಷಗಳ ವಾಣಿಜ್ಯ ಪದವಿ ಹೊಂದಿರಬೇಕು. ಗಣಕಯಂತ್ರ ಜ್ಞಾನ ಹೊಂದಿರಬೇಕು.
ವಯೋಮಿತಿ:
ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ
40 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಅಭ್ಯರ್ಥಿಗಳು ರೂ. 300 ಅರ್ಜಿ ಶುಲ್ಕ ಪಾವತಿಸಬೇಕು.
ಶುಲ್ಕ ಪಾವತಿಸುವ ವಿಧಾನ :
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 26/08/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28/09/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
Job Alert; Join our whatsapp group
ಅರ್ಜಿ ಸಲ್ಲಿಸಲು / apply link; https://kkrtcjobs.karnataka.gov.in/index.php
ಅಧಿಸೂಚನೆ /notification 1; https://kkrtcjobs.karnataka.gov.in/02_2022_notification.pdf
ಅಧಿಸೂಚನೆ /notification 2 ; https://kkrtcjobs.karnataka.gov.in/01_2022_notification.pdf
Leave a Comment