• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

500 ಕೋಟಿ ಆಂಟಿಬಯಾಟಿಕ್ ಮಾತ್ರೆ ನುಂಗಿದ ಭಾರತೀಯರು!

September 9, 2022 by Deepika Leave a Comment

2019ರಲ್ಲಿ ಭಾರೀ ಪ್ರಮಾಣದಲ್ಲಿ ಸೇವನೆ: ವರದಿ ಶೇ.47 ಆ್ಯಂಟಿಬಯಾಟಿಕ್‌ಗೆ ಅನುಮತಿಯೇ ಇಲ್ಲ

ನವದೆಹಲಿ: ಅನುಮತಿ ಪಡೆ ಯದ ಔಷಧಗಳ ಬಳಕೆ ಭಾರತ ದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, 2019ರಲ್ಲಿ ದೇಶದ ಖಾಸಗಿ ವಲಯದಲ್ಲಿ ಮಾರಾಟವಾದ ಶೇ.47ರಷ್ಟು ಆ್ಯಂಟಿ ಬಯೋಟಿಕ್ಸ್‌ಗಳನ್ನು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದಿಸಿಯೇ ಇರಲಿಲ್ಲ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ 2019ರ ಒಂದೇ ವರ್ಷ ಭಾರತಿ ಯರು ಸುಮಾರು 500 ಕೋಟಿ ಡೋಸ್ ಆ್ಯಂಟಿಬಯಾಟಿಕ್ ಸೇವಿಸಿದ್ದಾರೆ ಎಂಬುದೂ ಪತ್ತೆಯಾಗಿದೆ.

ಇನ್ನು ಭಾರತದಲ್ಲಿ ಅಜಿತ್ರೋಮೈಸಿನ್ 500 ಎಂಜಿ ಮಾತ್ರೆಯು ಜನರು ಅತ್ಯಂತ ಹೆಚ್ಚು ತೆಗೆದುಕೊಳ್ಳುವ ಆ್ಯಂಟಿ ಬಯೋಟಿಕ್‌ ಔಷಧಿಯಾಗಿದೆ. ಇದು ಶೇ.7.6ರ ಪಾಲು ಹೊಂದಿದೆ. ಇದಾದ ನಂತರ ಸೆಫಿಕ್ಸಿಮ್‌ 200 ಎಂಜಿ ಮಾತ್ರ 2ನೇ ಸ್ಥಾನದಲ್ಲಿದೆ ಎಂದು ಪ್ರಖ್ಯಾತ ವೈದ್ಯಕೀಯ ನಿಯತಕಾಲಿಕೆ ‘ಲ್ಯಾನೆಟ್’ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ಹೇಳಿದೆ.

ಹೀಗೆ ಗೊತ್ತುಗುರಿಯಿಲ್ಲದೆ ನೇರವಾಗಿ ಆ್ಯಂಟಿ ಬಯೋಟಿಕ್ಸ್‌ ಖರೀದಿ ಮಾಡಿ ಸೇವನೆ ಮಾಡುವ ಪ್ರವೃತ್ತಿ ಹೆಚ್ಚುತ್ತಿರು ವುದು ಆತಂಕಕಾರಿ ವಿಷಯ, ಇದು ಜನ ರಲ್ಲಿ ರೋಗ ನಿರೋಧಕ ಶಕ್ತಿಯನ್ನೇ ಕುಂಡಿಸುತ್ತಿದೆ. ಭಾರತದಲ್ಲಿ ಬಹು ಬ್ಯಾಕ್ಟಿರಿಯಾ ಸೋಂಕು ಹೆಚ್ಚಿದೆ.

SBI ನಲ್ಲಿ ಕ್ಲರ್ಕ್ ಹುದ್ದೆಗಳ ಬೃಹತ್ ನೇಮಕಾತಿ /sbi clerk recruitment 2022

ಅದಕ್ಕೆಂದೇ ಆ್ಯಂಟಿ ಬಯೋಟಿಕ್‌ಗಳ ಬೇಕಾಬಿಟ್ಟಿ ಬಳಕೆ ನಡೆದಿದೆ ಎಂದು ವರದಿ ಎಚ್ಚರಿಸಿದೆ. ಪ್ರತಿ ವಯಸ್ಕ ವ್ಯಕ್ತಿಗೆ ನಿತ್ಯ ನೀಡುವ ಸರಾಸರಿ ಡೋಸ್ ಆಧರಿಸಿ ಮಾಡಿದ ಲೆಕ್ಕಾಚಾರದ ಅನ್ವಯ 2019ರಲ್ಲಿ 507 ಕೋಟಿ ಡೋಸ್‌ನಷ್ಟು ಆ್ಯಂಟಿ ಬಯೋಟಿಕ್ಸ್ ಅನ್ನು ಭಾರತೀಯರು ಸೇವಿಸಿರುವ ಅಂದಾಜಿದೆ.

ಈ ಪೈಕಿ ಶೇ.47ರಷ್ಟು ಆ್ಯಂಟಿ ಬಯೋಟಿಕ್ಸ್‌ಗಳು ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದುಕೊಂಡ ಪಟ್ಟಿಯಲ್ಲಿ ಇಲ್ಲ ಎಂದು ಭಾರತದ ಖಾಸಗಿ ಆಸ್ಪತ್ರೆಗಳು/ಔಷಧ ಅಂಗಡಿಗಳು ನೀಡುವ ಔಷಧಗಳ ಬಗ್ಗೆ ಅಮೆರಿಕದ ಬೋಸ್ಟನ್ ವಿವಿ ಹಾಗೂ ದಿಲ್ಲಿಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ವಿಜ್ಞಾನಿಗಳು ಜಂಟಿ ಅಧ್ಯಯನ ನಡೆಸಿ ವರದಿ ಪ್ರಕಟಿಸಿದ್ದಾರೆ.

ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಮಂಜುನಾಥ ಹೆಗಡೆ ನಿಧನ

5000 ಔಷಧ ಕಂಪನಿಗಳ 9000 ಸ್ಟಾಕಿಸ್ಟ್ ಗಳಿಂದ ದತ್ತಾಂಶ ಸಂಗ್ರಹಿಸಲಾಗಿದೆ. ಆದರೆ ಸರ್ಕಾರಿ ಔಷಧ ಅಂಗಡಿಗಳು/ಆಸ್ಪತ್ರೆಗಳ ಅಂಕಿ-ಅಂಶ ಇದರಲ್ಲಿಲ್ಲ. ಆದರೆ ದೇಶದಲ್ಲಿ ಬಳಕೆಯಾಗುವ ಒಟ್ಟಾರೆ ಔಷಧಿಯಲ್ಲಿ ಖಾಸಗಿ ವಲಯದ ಪಾಲೇ ಶೇ.80-90ರಷ್ಟು ಇರುವ ಕಾರಣ, ವರದಿ ಮಹತ್ವ ಪಡೆದುಕೊಂಡಿದೆ.

UIDAI Recruitment 2022/ ಆಧಾರ್​ನಲ್ಲಿ ನೇಮಕಾತಿ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, ಆರೋಗ್ಯ

Explore More:

About Deepika

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar