ಭಟ್ಕಳ : ಗುಳ್ಮಿ ಕ್ರಾಸ್ ಆಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಡಿವೈಎಸ್ಪಿ ನೇತೃತ್ವದದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ ನಡೆದಿದೆ.
ಬಂಧಿತ ಆರೋಪಿ ಸಯ್ಯದ್ ಮುಸಾ ಸಯ್ಯದ್ ಅಹ್ಮದ್ ತಲಾಹಸ್ಟ್ರೀಟ್ ಹನಿಫಾಬಾದ್ ಹೆಬಳೆ ನಿವಾಸಿ ಎಂದು ತಿಳಿದು ಬಂದಿದೆ. ಈತ ಅಕ್ರಮವಾಗಿ ಒಟ್ಟು ಸುಮಾರು 2,500 ರೂಪಾಯಿ ಬೆಲೆಬಾಳುವ 209 ಗ್ರಾಂ ತೂಕದ ಒಣಗಿದ ಗಾಂಜಾವನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ನಗದು ಹಣ 200 ರೂಪಾಯಿ ಸಮೇತ ಆರೋಪಿಯನ್ನು ಬಂಧಿಸಲಾಗಿದೆ
ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment