ಹಳಿಯಾಳ : ಸಕ್ಕರೆ ಕಾರ್ಖಾನೆಯ ರೈತ ವಿರೋಧಿ ನೀತಿಯಿಂದ ರೈತರಿಗೆ ಆಗುತ್ತಿರುವ ಅನ್ಯಾಯ ವಿರೋಧಿಸಿ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಹಳಿಯಾಳ ತಾಲೂಕ ಘಟಕ ಇವರ ವತಿಯಿಂದ ತೇರಗಾಂವ ಜಿಲ್ಲಾ ಪಂಚಾಯತ ವ್ಯಾಪ್ತಿಯ ತೇರಗಾಂವ ಗ್ರಾಮದಲ್ಲಿ, ಬೆಳಗಾವಿ ಯಲ್ಲಾಪೂರ ರಾಜ್ಯ ಹೆದ್ದಾರಿಯನ್ನು ಬಂದ ಮಾಡುವುದರ ಮೂಲಕ, ತಾಲೂಕ ಮಟ್ಟದ ಬೃಹತ ಪ್ರತಿಭಟನೆಯನ್ನು ಮಾಡಲಾಯಿತು.
ಸ್ಥಳಕ್ಕೆ ಆಗಮಿಸಿದ ಹಳಿಯಾಳ ತಾಲೂಕು ದಂಡಾಧಿಕಾರಿಯಾದ ತಹಸಿಲ್ದಾರ ಪ್ರಕಾಶ ಗಾಯಕ್ವಾಡ, ಸಿಪಿಐ ರಂಗನಾಥ ನೀಲಮ್ಮನವರ, ದಾಡೇಲಿ ಡಿ. ವಾಯ. ಎಸ್. ಪಿ ಅವರು ಆಗಮಿಸಿ ಮಾತುಕತೆಯ ಮೂಲಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲು ಕಬ್ಬು ಬೆಳೆಗಾರರ ಸಂಘದ ಮನವೊಲಿಸಿದರು.
ಅಕ್ಟೋಬರ ಒಂದನೇ ತಾರೀಖಿನಂದು ಕಾರವಾರ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ರೈತರೊಂದಿಗೆ ನೇರವಾಗಿ ಸಭೆಯನ್ನು ಮಾಡಿ ರೈತರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ತಹಸೀಲ್ದಾರರು ವಾಗ್ದಾನವನ್ನು ಮಾಡಿದರು. ಉತ್ತರಕನ್ನಡ ಕಬ್ಬು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷರಾದ ಸಂದೀಪಕುಮಾರ ಬೋಬಾಟಿ ಮಾತನಾಡಿ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದು, ಒಂದು ವೇಳೆ ಒಂದನೇ ತಾರೀಖಿನಂದು ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೆ, ಅಲ್ಲಿಂದಲೇ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ಶಂಕರ ಕಾಜಗಾರ, ದೇಮಾನೀ ಶಿರೋಜಿ, ಅಶೋಕ ಮೇಟಿ, ಕೈತಾನ್ ಬಾರ್ಬೋಜಾ, ನಾಗೇಂದ್ರ ಜೀವೋಜಿ, ವಾಮನ ಮಿರಾಶಿ, ಅನಿಲ್ ಚೌಹಾನ ಸುರೇಶ ಶಿವಣ್ಣವರ, ಮುದುಕಪ್ಪ ಮುನವಳ್ಳಿ, ಮಲ್ಲಾರಿ ಗಾಡಿ, ಇಮ್ತಿಯಾಜ ಮನಿಯಾರ ಉಳಿದ ಸದಸ್ಯರು, ರೈತರು ಭಾಗವಹಿಸಿದ್ದರು.
Haliyala
ವರದಿ : ಮಂಜುನಾಥ. ಹ. ಮಾದಾರ.
Leave a Comment