ಶಿರಸಿ : ಅನ್ಯ ಕೋಮಿನ ಜನರನ್ನು ಕೆರಳಿಸುವ ರೀತಿಯಲ್ಲಿ ವಾಟ್ಸಪ್ ಸ್ಟೇಟಸ್ ಹಾಕಿದ್ದ ಆರೋಪದಲ್ಲಿ ಇಲ್ಲಿನ ಪೊಲೀಸರು ಈರ್ವರನ್ನು ವಶಕ್ಕೆ ಪಡೆದಿದ್ದಾರೆ.
ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮರಾಠಿಕೊಪ್ಪದ ನಿವಾಸಿಗಳಾದ ಗೌಸ್ ಅಜಮ್ ಹಾಗೂ ಮೆಹಬೂಬ್ ಸಾಬ್ ಎನ್ನುವವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಹಾಗೂ ಕೋಮು ಸೌಹಾರ್ಧಎಗೆ ಧಕ್ಕೆ ತರುವಂತೆ ಅನ್ಯ ಕೊಮೀನ ಜನರನ್ನ ಕೆರಳಿಸುವಂತೆ ವಾಟ್ಸಪ್ ಸ್ಟೇಟಸ್ ಗಳನ್ನು ಹಾಕಿಕೊಂಡಿದ್ದರು.
ಹೀಗಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈರ್ವರನ್ನೂ ವಶಕ್ಕೆ ಪಡೆದು ತಹಶೀಲ್ದಾರರ ಎದುರು ಹಾಜರುಪಡಿಸಿದ್ದಾರೆ. ಡಿವೈಎಸ್ಪಿ ರವಿ ಡಿ.ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ, ಪಿಎಸ್ಐ ಭೀಮಾಶಂಕರ್ ಮತ್ತು ಸಿಬ್ಬಂದಿ ಅರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಿದ್ದಾರೆ.
Leave a Comment