ಹಳಿಯಾಳ : ಈ.ಐ.ಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಹಳಿಯಾಳ ವಿರುದ್ಧ ಮಳೆ ಗಾಳಿ ಬಿರುಬಿಸಿಲು ಚಳಿಯನ್ನು ಲೆಕ್ಕಿಸದೆ ಹಗಲು-ರಾತ್ರಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟವು ಇಂದು 14ನೇ ದಿನವನ್ನು ಪ್ರವೇಶಿಸಿದೆ. ಕಬ್ಬು ಬೆಳೆಗಾರರ ಸಂಘದ ಉತ್ತರಕನ್ನಡ ಜಿಲ್ಲಾಧ್ಯಕ್ಷ ಸಂದೀಪ ಕುಮಾರ ಬೋಬಾಟಿ ಅವರ ನೇತೃತ್ವದಲ್ಲಿ ರೈತರು ನಗರದ ಎಪಿಎಂಸಿ ಹತ್ತಿರ ಧರಣಿಯಲ್ಲಿ ಕುಳಿತಿದ್ದಾರೆ.
ಬೇಡಿಕೆಗಳು ಈಡೇರುವವರೆಗೆ ಯಾವುದೇ ಕಾರಣಕ್ಕೂ ಧರಣಿಯನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ. ದಿನದಿನವೂ ಪ್ರತಿಭಟನೆಯ ಕಾವು ಮತ್ತು ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗುತ್ತದೆ ವಿನಾ ಕಡಿಮೆಯಾಗುವುದಿಲ್ಲ ಎಂದು ಆರ್ಭಟಿಸಿದ್ದಾರೆ. ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗಲಿ ಎನ್ನುವುದು ಎಲ್ಲರ ಆಶಯ.
ಹಳಿಯಾಳ
ವರದಿ : ಮಂಜುನಾಥ. ಹ. ಮಾದಾರ
09-10-2022
Leave a Comment