ಭಟ್ಕಳ:
ಸರ್ಕಾರದ ಸುತ್ತೋಲೆಯಂತೆ ಅ.26ರ ದೀಪಾವಳಿಯ ಬಲಿಪಾಡ್ಯಮಿ ದಿನದಂದು ಎಲ್ಲಾ ಅಧಿಸೂಚಿತ ದೇವಸ್ಥಾನಗಳಲ್ಲಿ ಸಂಜೆ 5.30ರಿಂದ 6.30ರ ಅವಧಿಯೊಳಗೆ ಗೋಧೂಳಿ ಲಗ್ನದಲ್ಲಿ ಗೋಪೂಜೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಸೂಚಿಸಿದ್ದಾರೆ.
ದೀಪಾವಳಿ ಬಲಿಪಾಡ್ಯಮಿ ಹಬ್ಬದ ದಿನದಂದು ಜಿಲ್ಲೆಯ ಅಧಿಸೂಚಿತ ದೇವಸ್ಥಾನದಲ್ಲಿ ಗೋ ಪೂಜೆ ನಡೆಸುವಂತೆ ತಹಶೀಲ್ದಾರ್ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ.
ಈ ಪ್ರಯುಕ್ತ ತಾಲ್ಲೂಕಿನಲ್ಲಿರುವ ಎಲ್ಲಾ ಎ.ಬಿ ಮತ್ತು ಸಿ ದೇವಸ್ಥಾನಗಳಲ್ಲಿ ಅ.26ರ ಬಲಿಪಾಡ್ಯಮಿ ದಿನದಂದು ಗೋವುಗಳಿಗೆ ಸ್ನಾನ ಮಾಡಿಸಿ ದೇವಾಲಯಕ್ಕೆ ಕರೆತಂದು ಅರಿಶಿನ ಕುಂಕುಮ ಹೂಗಳಿಂದ ಅಲಂಕರಿಸಿ, ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸುಗಳನ್ನ ಹಸುವಿಗೆ ನೀಡಿ ಸಂಜೆ 5.30ರಿಂದ 6.30ರ ಗೋಧೂಳಿ ಲಗ್ನದಲ್ಲಿ ಪೂಜಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
ಸನಾತನ ಹಿಂದೂ ಧರ್ಮದ ಗೋ ಪೂಜಾ ವಿಧಿವಿಧಾನಗಳು ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೀಪಾವಳಿ ಬಲಿಪಾಡ್ಯಮಿ ಹಬ್ಬದ ಗೋಪೂಜೆ ನಡೆಸಲು ಗ್ರಾ.ಪಂ ಸದಸ್ಯರು, ಸಮಾಜದ ಮುಖಂಡರು ಭಾಗಿಯಾಗಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಯಶಸ್ವಿಗೊಳಿಸಲು ಸೂಚಿಸಲಾಗಿದೆ.
Leave a Comment