sslc
ಬೆಂಗಳೂರು: 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಏಪ್ರಿಲ್ 1 ರಿಂದ 15 ರ ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಬೋರ್ಡ್ ಬಿಡುಗಡೆ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ಷೇಪಣೆ ಸಲ್ಲಿಸಲು ನವೆಂಬರ್ 28ರ ವರೆಗೆ ಅವಕಾಶ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ತಾತ್ಕಾಲಿಕ ವೇಳಾಪಟ್ಟಿ:
- ಏಪ್ರಿಲ್ 1 -ಪ್ರಥಮ ಭಾಷೆ ಪರೀಕ್ಷೆ
- ಏಪ್ರಿಲ್ 4ರಂದು ಗಣಿತ,
- ಏಪ್ರಿಲ್ 6- ದ್ವಿತೀಯ ಭಾಷೆ,
- ಏ. 8ರಂದು ಕೋರ್ ಸಬ್ಜೇಕ್ಟ … -ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್.
- ಏಪ್ರಿಲ್ 10-ವಿಜ್ಞಾನ,
- ಏಪ್ರಿಲ್ 12- ತೃತೀಯ ಭಾಷೆ ಹಿಂದಿ ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ಮತ್ತಿತರ,
- ಏಪ್ರಿಲ್ 15 ರಂದು ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆಗಳು ನಿಗದಿಯಾಗಿವೆ.
ಪೋಷಕರು ಆಕ್ಷೇಪಣೆ ಸಲ್ಲಿಸಲು;
ಇ- ಮೇಲ್ [email protected] ಅಥವಾ [email protected] ಅಥವಾ ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, 6ನೇ ಅಡ್ಡ ರಸ್ತೆ, ಮಲ್ಲೇಶ್ವರ, ಬೆಂಗಳೂರು- 560 003 ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬಹುದು.
Leave a Comment