ಕಾಸರಗೋಡು: ಕಾಲೇಜು ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಯೊಬ್ಬನನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಾಇಂಗಾಡ್ ನ ಅಲಾಮಿಪಲ್ಲಿಯ ಅಬ್ದುಲ್ ಶುಹೈಬ್ (21) ಬಂಧಿತ ವಿದ್ಯಾರ್ಥಿ, ಕಾಇಂಗಾಡ್ ನ ನಂದನಾ ವಿನೋದ್ (20) ಎಂಬಾಕೆಯ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ.
ನಂದನಾಪಡನ್ನಕಾಡಿನ ಕಾಲೇಜೊಂದರ ಪದವಿ ವಿದ್ಯಾರ್ಥಿನಿಯಾಗಿದ್ದಳು. ನಂದಾನ ಜೊತೆ ಪ್ರೀತಿಯ ನಾಟಕ ವಾಡಿ ಆಕೆ ಕಳುಹಿಸಿ ಕೊಟ್ಟ ಫೋಟೋ ಗಳನ್ನು ಸಾಮಾಜಿಕ ಜಾಲ ತಾಣಗಳಲಿ ಪ್ರಕಟಿಸಿ ಬೆದರಿಕೆ ಯೊಡ್ಡಿದ್ದರಿಂದ ಬೇಸತ್ತು ನಂದನಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮನೆಯ ಮೇಲಂತಸ್ತಿನ ಕೊಠಡಿಯಲ್ಲಿ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ನಂದನಾ ಪತ್ತೆಯಾಗಿದ್ದಳು.
ಆತ್ಮಹತ್ಯೆಯ ಮುನ್ನ ಶುಹೈಬ್ ನಂದನಾಳಿಗೆ ವಿಡಿಯೊ ಕಾಲ್ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ವಿಡಿಯೋ ಕಾಲ್ ನಡುವೆಯೇ ನಂದನಾ ನೇಣಿಗೆ ಶರಣಾಗಿರುವುದಾಗಿ ಶಂಕಿಸಲಾಗಿದೆ. ಆರೋಪಿ ಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳ ಪಡಿಸಲಾಗಿದೆ.
Leave a Comment