ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ; ಓರಿಸ್ಸಾ ಕಾರ್ಮಿಕರ ಆರ್ಭಟ
ಗೋಕರ್ಣ: ತದಡಿಯಲ್ಲಿ ಓರಿಸ್ಸಾ ಮೂಲದ ವ್ಯಕ್ತಿಯೊಬ್ಬ ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಶುಕ್ರವಾರ ಸಂಜೆ ತದಡಿ ಬಂದರನಲ್ಲಿ ಓರಿಸ್ಸಾ ಮೂಲದ ಓರ್ವ ವ್ಯಕ್ತಿ ಹಾಗೂ ಸ್ಥಳೀಯ ವ್ಯಕ್ತಿ ಜೊತೆ ಮಾತಿನ ಚಕಮಕಿ ನಡೆದಿದ್ದು ಈ ವೇಳೆ ಸುಮ್ಮನೆ ಇರುವಂತೆ ಹೇಳಿದ ಮೂರನೇ ವ್ಯಕ್ತಿಗೆ ಓರಿಸ್ಸಾ ಮೂಲದವನು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಕಳೆದ ವರ್ಷ ತದಡಿಯಲ್ಲಿ ಓರಿಸ್ಸಾ ಮೂಲದ ವ್ಯಕ್ತಿಯೊಬ್ಬ ಸ್ಥಳೀಯ ವ್ಯಕ್ತಿಯನ್ನು ಬರ್ಬರವಾಗಿ ಹಲ್ಲೆ ನಡೆಸಿ ಕೊಲೆಮಾಡಿದ್ದ. ನಂತರ ಸ್ಥಳೀಯರು ಬೋಟ ಮಾಲಿಕರು ಸೇರಿ ಪ್ರತಿಭಟನೆ ನಡೆಸಿ ಬೋಟ್‌ಗಳಲ್ಲಿ ಕೆಲಸ ಮಾಡುವ ಓರಿಸ್ಸಾ ಮೂಲದವರನ್ನು ವಾಪಸ್ ಕಳಿಸುವಂತೆ ನಿರ್ಣಯಿಸಿದ್ದರು.
ಸ್ಥಳೀಯ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ; ಓರಿಸ್ಸಾ ಕಾರ್ಮಿಕರ ಆರ್ಭಟ
ಹಲ್ಲೆಗೆ ಈಡಾದ ವ್ಯಕ್ತಿ ತದಡಿ ಮೂಲದ ರಾಮ ಮತ್ತು ರಾಯ್ ಕುಡೇಕರ ಅವರ ಕಿವಿಯ ಭಾಗದಲ್ಲಿ ಗಾಯವಾಗಿದೆ. ಇದ್ದಕ್ಕಿದ್ದಂತೆ ನೂರಕ್ಕೂ ಹೆಚ್ಚು ಜನ ಸ್ಥಳದಲ್ಲಿ ಸೇರಿರುವುದರಿಂದ ಗದ್ದಲದ ವಾತಾವರಣ ಉಂಟಾಯಿತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Leave a Comment