ಮರದ ತುಂಡು ಸಾಗಾಟ ; ಏಳು ಮಂದಿಯ ಬಂಧನ
ಹೊನ್ನಾವರ : ತಾಲೂಕಿನ ಮಂಕಿ ಅರಣ್ಯ ವಲಯ ವ್ಯಾಪ್ತಿಯ ಹಡಿಕಲ್ ಅರಣ್ಯ ಪ್ರದೇಶದಲ್ಲಿ ಸಾಗವಾನಿ ಮತ್ತು ಭರಣಗಿ ಮರ ಕಡಿದು ತುಂಡುಗಳನ್ನು ತಯಾರಿಸಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.
ಹೊನ್ನಾವರ ವಿಭಾಗ, ಭಟ್ಕಳ ಉಪವಿಭಾಗದ ವ್ಯಾಪ್ತಿಯಲ್ಲಿ ಅಕ್ರಮ ನಾಟಾ ಸಾಗಾಟ ನಡೆದಿದ್ದು, ಆರೋಪಿಗಳಾದ ಹಡಿಕಲ್ ನಿವಾಸಿ ನಾಗರಾಜ ನಾಯ್ಕ, ಚಿತ್ತಾರದ ಸಂದೀಪ ನಾಯ್ಕ, ಕೆಳಗಿನ ಇಂಡಗುAಜಿಯ ಗಂಗಾಧರ ಆಚಾರಿ ನೇಸಲ್ ನೀರ್ ಸಂದೀಪ ನಾಯ್ಕೆ, ಗೌರೀಶ ನಾಯ್ಕ ಪ್ರವೀಣ ನಾಯ್ಕ ಮತ್ತು ಅಡಿಕೆಕುಳಿ ಪ್ರಕಾಶ ಗೌಡ ಎನ್ನುವವರನ್ನು ದಸ್ತಗಿರಿ ಮಾಡಿ ಬಂಧಿಸಿದ್ದಾರೆ.
ಆರೋಪಿಗಳು ಕೃತ್ಯ ಕ್ಕೆ ಬಳಸಿದ ವಾಹನ ವಶಪಡಿಸಿಕೊಳ್ಳಲಾಗಿದೆ. ಕಳೆದ ಒಂದು ತಿಂಗಳ ಹಿಂದೆಯಷ್ಟೆ ಕೆಳಗಿನ ಇಂಡಗುAಜಿಯ ರಥ ಶಿಲ್ಪಿ ಗಂಗಾಧರ ಆಚಾರಿ ಇವರ ಕಟ್ಟಿಗೆ ಗೋಡೌನಿನಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಸಾಗವಾಗಿ ಕಟ್ಟಿಗೆಗಳನ್ನು ಜಪ್ತಿಪಡಿಸಲಾಗಿದ್ದು. ಈ ಪ್ರಕರಣದಲ್ಲಿಯೂ ಸಹ ಇವರ ಗೋಡಾನಿನಲ್ಲಿ ಅಕ್ರಮ ಕಟ್ಟಿಗೆಗಳು ಕಂಡು ಬಂದು ಜಪ್ತಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಸಿಎಫ್ ರವಿಶಂಕರ, ಎಸಿಎಫ್ ಕೆ.ಟಿ. ಬೋರಯ್ಯ, ಆರ್ ಎಫ್ ಒ ಸವಿತಾ ಆರ್, ದೇವಾಡಿಗ, ಡಿ ಆರ್ ಎಫ್ ಓ ಶಿವಾನಂದ ಇಂಚಲ, ಯೋಗೇಶ ಮೋಗೇರ, ಮಹಾದೇವ ಮಡ್ಡಿ, ಸಂದೀಪ ಎಸ್, ಅರ್ಕಸಾಲಿ ಮಂಜುನಾಥ ನಾಯ್ಕ, ಜಿ . ಸಂತೋಷ, ಷಣ್ಮಖ ಹವಳಗಿ, ಲೋಹಿತತ್ ನಾಯ್ಕೆ, ರೇಷ್ಮಾ ಜಿ.ನಾಯ್ಕ, ಅರಣ್ಯ ರಕ್ಷಕರಾದ ಮಹಾಬಲ ಗೌಡ, ಶಿವಾನಂದ ಪೂಜಾರಿ, ಸುರೇದ್ರನಾಥ ನಾಯ್ಕ ದೇವೇಂದ್ರ ಗೊಂಡ, ಬಸವರಾಜ ಲಮಾಣಿ, ಬಸಯ್ಯ ಸಂಕಣ್ಣವರ, ರಾಮ ನಾಯ್ಕ ವಿನಾಯಕ ನಾಯ್ಕ ಇದ್ದರು.
Leave a Comment