ಭಾರತ್ ಪೆಟ್ರೋಲಿಯಂಗೆ 9 ಪ್ರಶಸ್ತಿ
ನವದೆಹಲಿ: ಕೋಲ್ಕತ್ತಾದಲ್ಲಿ ನವೆಂಬರ್ 12 ರಂದು ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ 16ನೇ ಜಾಗತಿಕ ಸಂವಹನ ಸಮ್ಮೇಳನದಲ್ಲಿ ಕಾರ್ಪೊರೇಟ್ ಕೊಲ್ಯಾಟರಲ್‌ಗಳಿಗಾಗಿ ಭಾರತ್ ಪೆಟ್ರೋಲಿಯಂ ಒಟ್ಟು 9 ಶ್ರೇಷ್ಠ ಪ್ರಶಸ್ತಿಗಳನ್ನು ತನ್ನ ಮುಡಿಲಿಗೆರಿಸಿಕೊಂಡಿದೆ.
ನಿಗಮದ ಅಧಿಕಾರಿಗಳಾದ ಅಬ್ಬಾಸ್ ಅಖರ್, ದೇಬಾಶಿ ಸ್ನಾಯಕ್, ಮತ್ತು ಚಾರುಯಾದವ್, ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಸಾರ್ವಜನಿಕ ಸಂಬಂಧಗಳು ಮತ್ತು ಬ್ರಾಂಡ್ ಕಾರ್ಯತಂತ್ರಕ್ಕಾಗಿ ಪ್ರಶಸ್ತಿ ನೀಡಲಾಗಿದೆ. ಸಾರ್ವಜನಿಕ ಸಂಪರ್ಕಗಳು, ವ್ಯಾಪಾರ ಸಾಮಾಜಿಕ ಮಾಧ್ಯಮ ಮತ್ತು ಅಭಿಯಾನಗಳು, ಸಾಮಾಜಿಕ ಪ್ರಚಾರಗಳ ಬಳಕೆ, ವಾರ್ಷಿಕ ವರದಿ, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ಕಾರ್ಪೊರೇಟ್ ಜವಾಬ್ದಾರಿ ಅಭಿಯಾನದಲ್ಲಿ ಒಟ್ಟು 9 ಪ್ರಶಸ್ತಿಗಳು ದೊರೆತಿವೆ.
ಪ್ರತಿಭೆ ಮತ್ತು ವೃತ್ತಿಪರ ಮಾನದಂಡಗಳನ್ನು ಗುರುತಿಸಲು ವಾರ್ಷಿಕವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
Leave a Comment