ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ
ಯಲ್ಲಾಪುರ: ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮಾವಿನಮನೆ ಗ್ರಾಮಸ್ಥರು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಪ್ರತಿಭಟನಾಕಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಮಲವಳ್ಳಿಯಲ್ಲಿರುವ ಪಂಚಾಯತ್ ಕಚೇರಿ ಎದುರು ನಡೆಯಿತು.
ಸೋಮವಾರ ಬೆಳಿಗ್ಗೆ ಪಂಚಾಯತ ಕಚೇರಿ ಎದುರಿಗೆ ಬಂದ ಪ್ರತಿಭಟನಾಕಾರರ ಪರವಾಗಿ ಯುವ ಮುಖಂಡ ಗಣಪತಿ ವಾಗಳ್ಳಿ ಮಾತನಾಡಿ ಇತ್ತಿಚಿಗೆ ಮಾವಿನಮನೆ ಗ್ರಾಮದ ಬಾಸಲ್ ,ಮಲವಳ್ಳಿ ,ಬಾರೆ ತಿಮ್ಮಾನಿಯಲ್ಲಿ ವ್ಯಾಪಕವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಯುವಕರು ದುಶ್ಚಟಗಳಿಗೆ ಬಲಿಯಾಗಿ ಕಳ್ಳತನ , ಗಲಾಟೆ, ಮಹಿಳೆಯರ ಮೇಲೆ ಮಾನಸಿಕವಾಗಿ ದಾಳಿ ದೈಹಿಕವಾಗಿ ದಾಳಿಯಾಗುತ್ತಿದ್ದು, ಅಬಕಾರಿ ಇಲಾಖೆ ಪೊಲೀಸ್ ಇಲಾಖೆ ಪಂಚಾಯತ ಅಧಿಕಾರಿಗಳು ಜನಪ್ರತಿನಿಧಿಗಳು ಸೇರಿ ಅಕ್ರಮ ಮದ್ಯ ಮಾರಾಟ ಮಾಡದಂತೆ ತಡೆಯಬೇಕು ಎಂದರು.
ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ ಮಾತನಾಡಿ ಈ ಗ್ರಾಮದಲ್ಲಿ ಹಿಂದಿನಿಂದಲೂ ಅಕ್ರಮ ಮದ್ಯ ಮಾರಾಟ ನಡೆಯುತ್ತಾ ಬಂದಿದ್ದರು ಅದು ಈಗ ವಿಪರೀತ ಕ್ಕೆ ತಲುಪಿದೆ. ಸಾರಾಯಿ ಮಾರಾಟದಿಂದ ಅದೇಷ್ಟೋ ಕುಟುಂಬಗಳು ಬೀದಿಗೆ ಬಿದ್ದಿದೆ ಎಂದರು. ಇನ್ನು ಮಹಿಳಾ ಸಂಘಟನೆಯ ಪ್ರಮುಖರಾದ ಮಾಲತಿ ಭಟ್ ವಾಗಳ್ಳಿ ಮಾತನಾಡಿ ಈ ಹಿಂದೆ ಗ್ರಾಮದಲ್ಲಿ ಸಂಜೆ ವೇಳೆ ಹೊರಗಡೆ ತಿರುಗಾಡಲು ಭಯದ ವಾತಾವರಣವಿತ್ತು.
ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ
ಆದರೆ ಈಗ ಹಗಲಿನಲ್ಲೂ ಓಡಾಡಲು ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು. ಸಾಮಾಜಿಕ ಕಾರ್ಯಕರ್ತರಾದ ಪರಮೇಶ್ವರ ಹೆಗಡೆ ಚಾವಡಿ ಮಾತನಾಡಿ ನಮ್ಮ ಪ್ರತಿಭಟನೆ ಕೇವಲ ಇಲ್ಲಿಗೆ ಸೀಮಿತವಲ್ಲ. ಮದ್ಯ ಮಾರಾಟ ಸ್ಥಗಿತಗೊಳ್ಳದಿದ್ದರೆ ಅಬಕಾರಿ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದರು.
ನಂತರ ಪ್ರತಿಭಟನೆ ತೀವೃ ಸ್ವರೂಪಕ್ಕೆ ತಿರುಗುವುದನ್ನು ಗಮನಿಸಿದ ಗ್ರಾಮ ಪಂಚಾಯತ ಅಧ್ಯಕ್ಷೆ ಮಂಗಲಾ ಕುಣುಬಿ, ಉಪಾಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ , ಸ್ಥಳಕ್ಕೆ ಬಂದ ಅಬಕಾರಿ ಇಲಾಖೆಯ ನೀರಿಕ್ಷಕ ಪ್ರಶಾಂತ ಪಾಟೀಲ್, ಅಬಕಾರಿ ಉಪನೀರಿಕ್ಷಕ ಅನಿಲ್ ಕೊಕಟನೂರ್ ಪ್ರತಿಭಟನಾ ನಿರತ ಸ್ಥಳಕ್ಕೆ ಬಂದು ಪ್ರತಿಭಟನಾನಿರತರ ಮನವೊಲಿಸುವ ಪ್ರಯತ್ನ ನಡೆಸಿದರು.
ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ
ಗ್ರಾಮ ಪಂಚಾಯತ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪಂಚಾಯತ್ ಜನಪ್ರತಿನಿಧಿಗಳೋಂದಿಗೆ ಪ್ರತಿಭಟನಾ ನಿರತರನ್ನು ಸೇರಿಸಿ ವಿಶೇಷ ಗ್ರಾಮ ಸಭೆ ನಡೆಸಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಜಾಗೃತ ಸಮೀತಿಯನ್ನು ರಚಿಸಲಾಯಿತು. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಸಂಪೂರ್ಣವಾಗಿ ತಡೆಯುದಾಗಿ ಅಬಕಾರಿ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಬರವಸೆ ನೀಡಿದರು.
ಇನ್ನು ಮುಂದೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆದರೆ ಅಬಕಾರಿ ಇಲಾಖೆಗೆ ಮುತ್ತಿಗೆ ಹಾಕುದಾಗಿ ತಿಳಿಸಿ ಪ್ರತಿಭಟನೆ ಕೊನೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುವ ಮುಖಂಡ ವಿನಾಯಕ ಕೋಮಾರ್, ಉಮಾಶಂಕರ್ ಮರಾಠಿ, ಸದಾನಂದ ಭಟ್, ಪ್ರಸನ್ನ ಗಾಂವ್ಕರ್ ವಾಗಳ್ಳಿ, ರಾಘವೇಂದ್ರ ಸ್ವಾಮೀಕೇರಿ, ಶಿವಪ್ರಸಾದ ಭಟ್, ರಾಘವೇಂದ್ರ ಭಟ್, ಮಹಿಳಾ ಸಂಘಟನೆಯ ಮಾಲತಿ ಭಟ್ , ಗೀತಾ ಭಟ್, ರಂಜನಾ ಹುಲಸ್ವಾರ್ ಸೇರಿದಂತೆ ನೂರಾರು ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಮಾಡಿದ್ದರು.
—– ಗಣಪತಿ ವಾಗಳ್ಳಿ
Leave a Comment