• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ

November 22, 2022 by Sachin Hegde Leave a Comment

Table of Contents

Toggle
    • ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ
    • ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ
  • Share this:

ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ

ಯಲ್ಲಾಪುರ: ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮಾವಿನಮನೆ ಗ್ರಾಮಸ್ಥರು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಪ್ರತಿಭಟನಾಕಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಮಲವಳ್ಳಿಯಲ್ಲಿರುವ ಪಂಚಾಯತ್ ಕಚೇರಿ ಎದುರು ನಡೆಯಿತು.


ಸೋಮವಾರ ಬೆಳಿಗ್ಗೆ ಪಂಚಾಯತ ಕಚೇರಿ ಎದುರಿಗೆ ಬಂದ ಪ್ರತಿಭಟನಾಕಾರರ ಪರವಾಗಿ ಯುವ ಮುಖಂಡ ಗಣಪತಿ ವಾಗಳ್ಳಿ ಮಾತನಾಡಿ ಇತ್ತಿಚಿಗೆ ಮಾವಿನಮನೆ ಗ್ರಾಮದ ಬಾಸಲ್ ,ಮಲವಳ್ಳಿ ,ಬಾರೆ ತಿಮ್ಮಾನಿಯಲ್ಲಿ ವ್ಯಾಪಕವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಯುವಕರು ದುಶ್ಚಟಗಳಿಗೆ ಬಲಿಯಾಗಿ ಕಳ್ಳತನ , ಗಲಾಟೆ, ಮಹಿಳೆಯರ ಮೇಲೆ ಮಾನಸಿಕವಾಗಿ ದಾಳಿ ದೈಹಿಕವಾಗಿ ದಾಳಿಯಾಗುತ್ತಿದ್ದು, ಅಬಕಾರಿ ಇಲಾಖೆ ಪೊಲೀಸ್ ಇಲಾಖೆ ಪಂಚಾಯತ ಅಧಿಕಾರಿಗಳು ಜನಪ್ರತಿನಿಧಿಗಳು ಸೇರಿ ಅಕ್ರಮ ಮದ್ಯ ಮಾರಾಟ ಮಾಡದಂತೆ ತಡೆಯಬೇಕು ಎಂದರು.


ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ ಮಾತನಾಡಿ ಈ ಗ್ರಾಮದಲ್ಲಿ ಹಿಂದಿನಿಂದಲೂ ಅಕ್ರಮ ಮದ್ಯ ಮಾರಾಟ ನಡೆಯುತ್ತಾ ಬಂದಿದ್ದರು ಅದು ಈಗ ವಿಪರೀತ ಕ್ಕೆ ತಲುಪಿದೆ. ಸಾರಾಯಿ ಮಾರಾಟದಿಂದ ಅದೇಷ್ಟೋ ಕುಟುಂಬಗಳು ಬೀದಿಗೆ ಬಿದ್ದಿದೆ ಎಂದರು. ಇನ್ನು ಮಹಿಳಾ ಸಂಘಟನೆಯ ಪ್ರಮುಖರಾದ ಮಾಲತಿ ಭಟ್ ವಾಗಳ್ಳಿ ಮಾತನಾಡಿ ಈ ಹಿಂದೆ ಗ್ರಾಮದಲ್ಲಿ ಸಂಜೆ ವೇಳೆ ಹೊರಗಡೆ ತಿರುಗಾಡಲು ಭಯದ ವಾತಾವರಣವಿತ್ತು.

ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ

ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ

ಆದರೆ ಈಗ ಹಗಲಿನಲ್ಲೂ ಓಡಾಡಲು ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು. ಸಾಮಾಜಿಕ ಕಾರ್ಯಕರ್ತರಾದ ಪರಮೇಶ್ವರ ಹೆಗಡೆ ಚಾವಡಿ ಮಾತನಾಡಿ ನಮ್ಮ ಪ್ರತಿಭಟನೆ ಕೇವಲ ಇಲ್ಲಿಗೆ ಸೀಮಿತವಲ್ಲ. ಮದ್ಯ ಮಾರಾಟ ಸ್ಥಗಿತಗೊಳ್ಳದಿದ್ದರೆ ಅಬಕಾರಿ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದರು.

Labour Card Scholarship apply Online 2022-23/ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ


ನಂತರ ಪ್ರತಿಭಟನೆ ತೀವೃ ಸ್ವರೂಪಕ್ಕೆ ತಿರುಗುವುದನ್ನು ಗಮನಿಸಿದ ಗ್ರಾಮ ಪಂಚಾಯತ ಅಧ್ಯಕ್ಷೆ ಮಂಗಲಾ ಕುಣುಬಿ, ಉಪಾಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ , ಸ್ಥಳಕ್ಕೆ ಬಂದ ಅಬಕಾರಿ ಇಲಾಖೆಯ ನೀರಿಕ್ಷಕ ಪ್ರಶಾಂತ ಪಾಟೀಲ್, ಅಬಕಾರಿ ಉಪನೀರಿಕ್ಷಕ ಅನಿಲ್ ಕೊಕಟನೂರ್ ಪ್ರತಿಭಟನಾ ನಿರತ ಸ್ಥಳಕ್ಕೆ ಬಂದು ಪ್ರತಿಭಟನಾನಿರತರ ಮನವೊಲಿಸುವ ಪ್ರಯತ್ನ ನಡೆಸಿದರು.

ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ

ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ

ಗ್ರಾಮ ಪಂಚಾಯತ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪಂಚಾಯತ್ ಜನಪ್ರತಿನಿಧಿಗಳೋಂದಿಗೆ ಪ್ರತಿಭಟನಾ ನಿರತರನ್ನು ಸೇರಿಸಿ ವಿಶೇಷ ಗ್ರಾಮ ಸಭೆ ನಡೆಸಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಜಾಗೃತ ಸಮೀತಿಯನ್ನು ರಚಿಸಲಾಯಿತು‌. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಸಂಪೂರ್ಣವಾಗಿ ತಡೆಯುದಾಗಿ ಅಬಕಾರಿ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಬರವಸೆ ನೀಡಿದರು.

ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ

ಇನ್ನು ಮುಂದೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆದರೆ ಅಬಕಾರಿ ಇಲಾಖೆಗೆ ಮುತ್ತಿಗೆ ಹಾಕುದಾಗಿ ತಿಳಿಸಿ ಪ್ರತಿಭಟನೆ ಕೊನೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುವ ಮುಖಂಡ ವಿನಾಯಕ ಕೋಮಾರ್, ಉಮಾಶಂಕರ್ ಮರಾಠಿ, ಸದಾನಂದ ಭಟ್, ಪ್ರಸನ್ನ ಗಾಂವ್ಕರ್ ವಾಗಳ್ಳಿ, ರಾಘವೇಂದ್ರ ಸ್ವಾಮೀಕೇರಿ, ಶಿವಪ್ರಸಾದ ಭಟ್, ರಾಘವೇಂದ್ರ ಭಟ್, ಮಹಿಳಾ ಸಂಘಟನೆಯ ಮಾಲತಿ ಭಟ್ , ಗೀತಾ ಭಟ್, ರಂಜನಾ ಹುಲಸ್ವಾರ್ ಸೇರಿದಂತೆ ನೂರಾರು ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಮಾಡಿದ್ದರು.

—– ಗಣಪತಿ ವಾಗಳ್ಳಿ

  • ಗೂಡಂಗಡಿಗಳಲ್ಲಿ ಎಗ್ಗಿಲ್ಲದೆ ಸಾರಾಯಿ ಮಾರಾಟ : ಮೀನುಗಾರ ಸಾವು
  • ಅಕ್ರಮವಾಗಿ ಮದ್ಯ ಹಾಗೂ ಗಾಂಜಾ ಮಾರಾಟ
  • ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Filed Under: Canara News, Yellapur Tagged With: ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,116 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...