ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ: ಸಿಪಿಐ
ಸಿದ್ದಾಪುರ: ಇತ್ತೀಚೆಗೆ ಅಡಕೆ ಕಳ್ಳತನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಸಿಪಿಐ ಕುಮಾರ ಕೆ.ಅವರು ಅಡಕೆ ವರ್ತಕರ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ನಿರ್ದೇಶನ ನೀಡಿದ ಅವರು ಅಡಕೆಯನ್ನು ಕೊಳ್ಳುವಾಗ ಇದು ರೈತರಿಂದ ಬಂದಿದೆಯೋ ಇಲ್ಲ ಬೇರೆಯವರಿಂದ ಬಂದಿದೆಯೋ ಎಂದು ಪರಿಶೀಲನೆ ಮಾಡಿ ಕೊಳ್ಳಬೇಕು.
ಸಣ್ಣ ವಯಸ್ಸಿನ ಮಕ್ಕಳು ಅಡಕೆ ತಂದರೆ ಸರಿಯಾಗಿ ವಿಚಾರಣೆ ಮಾಡಬೇಕು. ಅಡಕೆ ವರ್ತಕರ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚಿಸಿದರು. ಪಿಎಸ್ ಐ ಮಲ್ಲಿಕಾರ್ಜುನಯ್ಯ ಕೊರಾಣಿ ಉಪಸ್ಥಿತರಿದ್ದು ಸಲಹೆ ನೀಡಿದರು. ಹೆಚ್ಚಿನ ಅಡಕೆ ವರ್ತಕರು ಉಪಸ್ಥಿತರಿದ್ದರು.
Leave a Comment