ಯಲ್ಲಾಪುರ: ಪ್ರತಿವರ್ಷದಂತೆ ಈ ಬಾರಿಯೂ ಪ್ರಕೃತಿ ಮತ್ತು ಸಂಸ್ಕೃತಿ ಬೆಸುಗೆ ಯ ಸಂಕಲ್ಪದೊAದಿಗೆ೩೬ನೆ ವರ್ಷದ ಸಂಕಲ್ಪ ಉತ್ಸವವು ಡಿ.೨೬ ಮತ್ತು ೨೭ರಂದುಪಟ್ಟಣದ ಗಾಂಧಿ ಕುಟೀರದಲ್ಲಿ ನಡೆಯಲಿದೆ ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಪಟ್ಟಣದ ಅಡಿಕೆಭವನ ದಲ್ಲಿ ಸಂಕಲ್ಪ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಸಂಕಲ್ಪ ಉತ್ಸವದಲ್ಲಿ ಯಕ್ಷಗಾನ ಹಿಮ್ಮೇಳ ವೈಭವ, ಭರತನಾಟ್ಯ, ಸುಗಮ ಸಂಗೀತ, ನಿಸರ್ಗ ಛಾಯಾಚಿತ್ರ ಸ್ಪರ್ಧೆ, ಜಾನಪದ ನೃತ್ಯ, ಸಂಗೀತ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಡಿ.೨೬ರಂದು ಸಂಜೆ ೬ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಕ್ತಾರರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ ಮತ್ತೂರು ಆಗಮಿಸಲಿದ್ದು, ವಿಶ್ವಗುರು ಭಾರತ ವಿಷಯದ ಕುರಿತು ಉಪನ್ಯಾಸ ನೀಡುವರು, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಟಿ.ಎಂ.ಎಸ್.ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಯ.ತಾ.ಶಿ.ಸ.ಅಧ್ಯಕ್ಷ ರವಿ ಶಾನಭಾಗ ಉಪಸ್ಥಿತರಿರುವರು.
ಸಂಜೆ ೭ ಗಂಟೆಗೆ ಬೆಂಗಳೂರಿನ ಡಾ.ಅರ್ಚನಾ ತಂಡದವರಿAದ ಭರತನಾಟ್ಯ, ವಿಭಾ ರಮೇಶ ಹೆಗಡೆ ತಂಡದವರಿAದ ಸುಗಮ ಸಂಗೀತ, ನಂತರ ಪ್ರಸಿದ್ಧ ಕಲಾವಿದರಿಂದ ಐರಾವತ ಯಕ್ಷಗಾನ ನಡೆಯಲಿದೆ. ಡಿ.೨೭ರಂದು ಮಧ್ಯಾಹ್ನ ೪ ಗಂಟೆಗೆ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ೫ ಗಂಟೆಗೆ ಸಿಂಚನಾ ದಾನಗೇರಿಯವರಿಂದ ವಯೋಲಿನ್ ವಾದನ ನಡೆಯಲಿದೆ.
ಡಿ ೨೭ ರಂದು ಸಂಜೆ ೬ ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಚಿವ ಸುನೀಲ್ ಕುಮಾರ ಕಾರ್ಕಳ, ಶಾಸಕಿ ರೂಪಾಲಿ ನಾಯ್ಕ, ವಿ.ಪ.ಸದಸ್ಯ ಶಾಂತಾರಾಮ ಸಿದ್ದಿ, ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ,ವಿಸ್ತಾರ ಮೀಡಿಯಾ ಸಿಇಒ ಹರಿಪ್ರಕಾಶ ಕೋಣೆಮನೆ, ಮಾಜಿ ಶಾಸಕ ವಿ.ಎಸ್.ಪಾಟೀಲ್, ಕೆನರಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಜಿ.ಜಿ.ಹೆಗಡೆ ಕುಮಟಾ, ಸಿದ್ದಾಪುರದ ಶಶಿಭೂಷಣ ಹೆಗಡೆ, ಶ್ರೀನಿವಾಸ ಭಟ್ಟ ಧಾತ್ರಿ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಸಂಕಲ್ಪ ಪ್ರಶಸ್ತಿ ಪ್ರಧಾನ ನಡೆಯಲಿದೆ. ನಂತರ ಸೀಮಾ ಭಾಗ್ವತ್ ತಂಡದವರಿAದ ಭರತನಾಟ್ಯ ರೂಪಕ, ೮ ಗಂಟೆಗೆ ಖ್ಯಾತ ಕಲಾವಿದರಿಂದ ರಾಮಾಂಜನೇಯ ಯಕ್ಷಗಾನ ನಡೆಯಲಿದೆ ಎಂದರು.ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ ಮಾತನಾಡಿ ೭೦ ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಮೋದ ಹೆಗಡೆಯವರ ಅಭಿನಂದನಾ ಸಮಾರಂಭವು ಡಿ.೨೫ ರಂದು ಪಟ್ಟಣ ಎಪಿಎಂಸಿ ರೈತಭವನದಲ್ಲಿ ನಡೆಯಲಿದೆ .
ಸಂಘಟನಾ ದೃಷ್ಟಿಯಿಂದ ಅದರೊಂದಿಗೆ ಸಂಕಲ್ಪ ಉತ್ಸವವನ್ನು ಜೋಡಿಸಲಾಗಿದ್ದು ಪ್ರತಿವರ್ಷ ನವೆಂಬರನಲ್ಲಿ ನಡೆಯುತ್ತಿದ್ದ ಸಂಕಲ್ಪ ಉತ್ಸವ ಡಿಸೆಂಬರನಲ್ಲಿ ನಡೆಯಲಿದೆ. ಒಂದುವಾರ ಕಾಲವೇ ನಡೆಯಲಿದ್ದು ಬೇರೆ ಬೇರೆ ದಿನಗಳಲ್ಲಿ ಗ್ರಾಮಾಂತರ ಭಾಗಗಳಲ್ಲಿಯೂ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಿ,ಜಿ ಹೆಗಡೆ,ಗೋಪಾಲಕೃಷ್ಣ ತಾರಿಮಕ್ಕಿ, ಯಕ್ಷಕಲಾರಂಗ ಸಂಪಾದಕಗೋಪಾಲಕೃಷ್ಣ ಭಾಗ್ವತ ಉಪಸ್ಥಿತರಿದ್ದರು.
Leave a Comment