ಯಲ್ಲಾಪುರ ತಾಲೂಕಿನ ಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಅಪಘಾತ

ಯಲ್ಲಾಪುರ : ತಾಲೂಕಿನಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ಬರಹ ಗಾರ ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಧಾರವಾಡ ದಲ್ಲಿಅಪ ಘಾತವಾಗಿದ್ದು,ಇವರಿಗೆ ದ್ವಿಚಕ್ರವಾಹನವೊಂದು ಹಿಂಬದಿಯಿಂದ ಗುದ್ದಿ ಗಂಭೀರ ಸ್ವರೂಪದ ಗಾಯಪಡಿಸಿದ ಘಟನೆ ದಾರವಾಡ ಬೆಳಗಾವಿ ರಾ.ಹೆದ್ದಾರಿ ೪೮ ರ ಬೇಲೂರು ಕೈಗಾರಿಕಾ ಪ್ರದೇಶದ ಕ್ರಾಸ್ ಬಳಿ ನಡೆದಿದೆ.
ಕಾರ್ಯನಿಮಿತ್ತ ದಾರವಾಡಕ್ಕೆ ಹೋಗಿದ್ದ ಇವರು
ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಇವರಿಗೆ ಅತೀವೇಗ ಮತ್ತು ನಿಷ್ಕಾಳಜಿಯಿಂದ ಬಂದ ಮೋಟರ್ ಸೈಕಲ್ ಸವಾರ ಡಿಕ್ಕಿಪಡಿಸಿ ಗಂಭೀರ ಗಾಯಪಡಿಸಿ ಪರಾರಿಯಾಗಿದ್ದಾನೆ.
ಯಲ್ಲಾಪುರ ತಾಲೂಕಿನ ಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಅಪಘಾತ
ಇವರ ಮುಖಕ್ಕೆ ಗಂಭೀರಸ್ವರೂಪದ ಗಾಯವಾಗಿದ್ದು ಸ್ಥಳದಲ್ಲಿ ಗಾಯಗೊಂಡು ಬಿದ್ದ ಇವರನ್ನು ಕೂಡಲೇ ಸ್ಥಳಿಯ ದಾರವಾಡ ಸಿವಿಲ್ ಆಸ್ಪತ್ರೆಗೆ ಧಾಖಲಿಸಿ ನಂತರ ಹೆಚ್ಚಿನ ತುರ್ತು ಚಿಕಿತ್ಸೆಗೆ ದಾರವಾಡ ಸತ್ತೂರಿನ ಎಸ್.ಡಿ.ಎಂ.ಆಸ್ಪತ್ರೆಗೆ ಚಿಕಿತ್ಸೆಗೆ ಧಾಖಲಿಸಲಾಗಿದೆ. ತೀವೃ ನಿಘಾಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತಪಡಿಸಿದ ಸಂಬಂಧ ಮೋಟರ್ ಸೈಕಲ್ ಸವಾರನ ಮೇಲೆ ಗರಗ್ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.———–
Leave a Comment