ಹೊಸಾಕುಳಿ ಗ್ರಾಮದಲ್ಲಿ ನಾಯಿ ಹಿಡಿಯಲು ಆಗಮಿಸಿದ ಚಿರತೆ ಸಿಸಿ ಕ್ಯಾಮರದಲ್ಲಿ ದೃಶ್ಯಾವಳಿ ಸೆರೆ
ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಳಿಬೈಲ್ ಸಮೀಪದ ಗಣಪು ಪಿ ಹೆಗಡೆ ಎನ್ನುವವರ ಮನೆಯ ಅಂಗಳಕ್ಕೆ ಶನಿವಾರ ಮುಂಜಾನೆ ಚಿರತೆಯೊಂದು ಆಗಮಿಸಿದೆ.
ಮನೆಯಂಗಳದಲ್ಲಿ ಇದ್ದ ನಾಯಿ ಹಿಡಿಯಲು ಆಗಮಿಸಿದ ಚಿರತೆಯು ದಾಳಿ ಮಾಡಿರುವ ದೃಶ್ಯಾವಳಿಯ ತುಣುಕು ಮನೆಯ ಸಿ.ಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಶನಿವಾರ ಮುಂಜಾನೆ ೪;೨೦ರ ಸುಮಾರಿಗೆ ಈ ಘಟನೆ ನಡೆದಿದ್ದು ನಾಯಿ ಒಂದೆಸಮನೆ ಕೂಗಿರುದರಿಂದ ಮನೆಯವರು ಲೈಟ್ ಆನ್ ಮಾಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದೆ.
ಇತ್ತೀಚಿನ ದಿನದಲ್ಲಿ ಚಿರತೆ ಕಾಟ ಹೊಸಾಕುಳಿ ಸಾಲ್ಕೋಡ್ ಗ್ರಾಮದಲ್ಲಿ ಆತಂಕ ಮೂಡಿಸುತ್ತಿದೆ. ಈ ಹಿಂದೆ ಅರಣ್ಯ ಇಲಾಖೆಯವರು ಬೋನ್ ವ್ಯವಸ್ಥೆ ಕಲ್ಪಿಸಿದ್ದರು ಬೋನ್ ಒಳಗೆ ಚಿರತೆ ಹೋಗದೆ ತಪ್ಪಿಸಿಕೊಂಡಿತ್ತು. ಗ್ರಾ.ಪಂ. ಉಪಾಧ್ಯಕ್ಷ ಕಿರಣ ಹೆಗಡೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುದಾಗಿ ತಿಳಿಸಿದ್ದಾರೆ
Leave a Comment