ಯಲ್ಲಾಪುರ : ಪಟ್ಟಣದ ಗಾಂಧಿಕುಟಿರದಲ್ಲಿ ಡಿ. ೮ ಮತ್ತು ೯ ರಂದು ಸಂಜೆ ೬.೩೦ ಕ್ಕೆ ಇಫಿಜೀನಿಯಾ' ಮತ್ತು
ಮುಕ್ತಧಾರ’ ನಾಟಕ ನಡೆಯಲಿದೆ.ಎಂದುಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದಅಧ್ಯಕ್ಷಎಂ .ಆರ್.ಹೆಗಡೆಕುAಬ್ರಿಗುಡ್ಡೆ ಹೇಳಿದರು. ಅವರುಅವರು ಪಟ್ಟಣದಅಡಿಕೆ ಭವನದಲ್ಲಿಅಡಿಕೆ ವ್ಯವಹಾಸ್ಥರ ಸಂಘ ಹಮ್ಮಿಕೊಂಡ ನೀನಾಸಂ ತಿರುಗಾಟದ ನಾಟಕ ಪ್ರದರ್ಶನದಕುರಿತು ಮಾಹಿತಿ ನೀಡಿ ಮಾತನಾಡಿ, ಈ ಹೊಸ ಅಲೆ ನಾಟಕದಕುರಿತುಯುವಜನಾಂಗಕ್ಕೆ ಆಸಕ್ತಿ ಬೆಳೆಸುವ ಮತ್ತು ಚಿಂತನೆಗೊಳಪಡಿಸುವ ಉದ್ದೇಶದಿಂದ ನಮ್ಮಅಡಿಕೆ ವ್ಯವಹಾರಸ್ಥರ ಸಂಘ ಹಲವು ವರ್ಷಗಳಿಂದ ಸಣ್ಣ ಪ್ರಯತ್ನ ನಡೆಸುತ್ತಿದೆಎಂದರಲ್ಲದೇ .ನಮ್ಮ ಪ್ರದೇಶದಲ್ಲಿ ಸಾಹಿತ್ಯ, ಸಂಗೀತ, ಕಲೆ, ಯಕ್ಷಗಾನ, ನಾಟಕ ಇವುಗಳಿಗೆ ವಿಶೇಷ ಸ್ಥಾನ ಇದೆ. ಅವುಗಳಲ್ಲಿ ಹೊಸ ಅಲೆ ನಾಟಕವುಕೂಡ ಪ್ರವರ್ದ್ಧಮಾನಕ್ಕೆ ಬರುತ್ತಿದೆ.
ಹೆಗ್ಗೋಡಿನ ನಿನಾಸಂ, ಮೈಸೂರಿನರಂಗಾಯಣ ಸೇರಿದಂತೆ ಹಲವು ನಾಟಕದ ತಂಡಗಳನ್ನು ಕರೆಸಿ ಇಲ್ಲಿನಜನರಿಗೆತಲುಪಿಸುವುದು ನಮ್ಮಉದ್ಧೇಶಎಂದರು
.ಸಂಘಟಕರಾದ ನಾರಾಯಣ ಭಟ್ಟ ಮಾತನಾಡಿ, ʼಇಫಿಜೀನಿಯಾʼ ನಾಟಕವನ್ನುಗ್ರೀಕ್ ಕವಿ ಯುರಿಪಿಡೀಸ್ ೨೫೦೦ ವರ್ಷಗಳಿಂದ ಹಿಂದೆ ಬರೆದಿದ್ದಅತ್ಯಂತ ಮನಮೋಹಕವು, ಅರ್ಥಗರ್ಭಿತವೂ ಹೃದಯಕರಗುವಂತಹ, ದುರಂತಕಥೆ. ಹೀಗೆ ಸುಂದರವಾಗಿಕಥೆಯನ್ನು ನಿರೂಪಿಸಿದ್ದಾರೆ.
ಅದನ್ನುಕನ್ನಡಕ್ಕೆ ಮಾದವ ಚಿಪ್ಪಳಿ ಭಾಷಾಂತರಿಸಿದ್ದು, ವಿ.ಆರ್.ವೆಂಕಟರಮಣ ಐತಾಳ ನಿರ್ದೇಶನದಲ್ಲಿ ನಿನಾಸಂ ತಂಡ ಈ ನಾಟಕ ಪ್ರದರ್ಶಿಸಲಿದ್ದಾರೆ. ಹಾಗೆಯೇದೇಶದ ಪ್ರಸಿದ್ದ ಕವಿ ರವೀಂದ್ರನಾಥಠಾಗೋರ್ರ “ಮುಕ್ತಧಾರ” ಎಂಬ ನಾಟಕವನ್ನು ರಚಿಸಿದ್ದು, ಕನ್ನಡಕ್ಕೆ ಅಹೋಬಲ ಶಂಕರ ಅನುವಾದಿಸಿದ್ದಾರೆ. ಇದನ್ನು ಪ್ರವೀಣಕೂಮಾರಎಡಮಂಗಲ ನಿರ್ದೇಶಿಸಿದ್ದಾರೆ. ಈ ನಾಟಕವುಕೂಡ ಹರಿಯುವತೊರೆ, ನೀರು, ಕೃಷಿ ಜನರ ಬದುಕಿನ ಬವಣೆ, ಆಧುನಿಕತಂತ್ರಜ್ಞಾನ, ಆಣೆಕಟ್ಟು, ಪ್ರತಿಭಟನೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಹೀಗೆ ಹತ್ತಾರು ಆಯಾಮಗಳನ್ನೊಳಗೊಂಡಿದೆ ಎಂದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ನಾಟಕಕ್ಕೆ ಚಾಲನೆ ನೀಡಲಿದ್ದು, ವಿ.ಪ. ಸದಸ್ಯ ಶಾಂತಾರಾಮ ಸಿದ್ದಿ, ರಾ.ವೀ.ಯೋ. ಉಪಾಧ್ಯಕ್ಷ ಪ್ರಮೋದ ಹೆಗಡೆ, ತಹಶೀಲ್ದಾರ ಶ್ರೀಕೃಷ್ಣ ಕಾಂಮ್ಕರ್, ಡಿ.ಸಿ.ಎಫ್ ಎಸ್.ಜಿ.ಹೆಗಡೆ, ಅಡಿಕೆ ವ್ಯವಹಾರಸ್ಥರ ಸಂಘದಅಧ್ಯಕ್ಷರವಿ ಹೆಗಡೆ, ಪಿ.ಡಬ್ಲು.ಡಿಅಭಿಯಂತರ ವಿ.ಎಂ.ಭಟ್ಟ, ತಾ.ಪಂ. ಇ.ಓ ಜಗದೀಶಕಮ್ಮಾರ ಉಪಸ್ಥಿತರಿರುವರು.ಸುದ್ದಿ ಗೋಷ್ಠಿಯಲ್ಲಿರವಿ ಹೆಗಡೆ, ಲೋಕನಾಥಗಾಂವ್ಕರ್ ಉಪಸ್ಥಿತರಿದ್ದರು
Leave a Comment