ಅರೆಕಾಲಿಕ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ: ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಮಕ್ಕಳ ಪಾಲನಾ ಸಂಸ್ಥೆಯಲಿನ ಮಕ್ಕಳಿಗೆ ಒದಗಿಸಲಾಗುವ ಪಠ್ಯ ಹಾಗೂ ಪಠೇತರ ಚಟುವಟಿಕೆಗಾಗಿ ಜಿಲ್ಲೆಯಲ್ಲಿನ ಬಾಲಮಂದಿರ ಮತ್ತು ವೀಕ್ಷಣಾಲಯಗಳಲ್ಲಿನ ಮಕ್ಕಳಿಗೆ ದೈಹಿಕ/ಯೋಗ, ಸಂಗೀತಾ/ಕ್ರಾಫ್ಟ್, ಗಣಿತ/ವಿಜ್ಞಾನ, ಸಮಾಜ ವಿಜ್ಞಾನ/ ಆಂಗ್ಲ ವಿಷಯದ ಮೇಲೆ ಪಾಠ ಮಾಡಲು ಅರೆಕಾಲಿಕ ಶಿಕ್ಷಕರು, ಬೋಧಕರ ನೇಮಕಾತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಜ.2ರೊಳಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಎಮ್.ಜಿ. ರಸ್ತೆ, ಕಾರವಾರ ಇವರಿಂದ ಅರ್ಜಿ ಪಡೆದು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08382-220182 ಗೆ ಸಂಪರ್ಕಿಸಿ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೇತನ ಶ್ರೇಣಿ; ರೂ.10,000 /-
Leave a Comment