ಅಂಬ್ಯುಲೆನ್ಸ್ ಪಲ್ಟಿ : ರೋಗಿ ಸಾವು
ಗೋಕರ್ಣ :
ಕಾರವಾರದಿAದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿರುವ ವೇಳೆ ಗೋಕರ್ಣ ಸಮೀಪದ ಬೆಟ್ಕುಳಿಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿ ಬಿದ್ದಿದೆ.
ರೋಗಿಯನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿ ಬಿದ್ದ ಪರಿಣಾಮ ರೋಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗೋಕರ್ಣ ಸಮೀಪದ ಬೆಟ್ಕುಳಿಯ ಚತುಷ್ಪಥದಲ್ಲಿ ಶುಕ್ರವಾರ ಸಂಭವಿಸಿದೆ.
ಅಪಘಾತದಲ್ಲಿ ರೋಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಅಂಬ್ಯುಲೆನ್ಸ್ ನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹಿರೇಗುತ್ತಿಯ 108 ಅಂಬ್ಯುಲೆನ್ಸ್ ಹಾಗೂ ಗೋಕರ್ಣದ ಜೀವ ರಕ್ಷಕ ಅಂಬ್ಯುಲೆನ್ಸ್ ಸಹಾಯದಿಂದ ಕುಮಟಾ ಸರ್ಕಾರಿ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಗೋಕರ್ಣ ಪೊಲೀಸರು ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಗೊಂಡಿರುವುದು ಕಾರವಾರದ ಖಾಸಗಿ ಅಂಬ್ಯುಲೆನ್ಸ್ ಎಂದು ತಿಳಿದು ಬಂದಿದೆ.
Leave a Comment