ಸ್ಕೂಟಿಗೆ ಕಂಟೇನರ್ ಡಿಕ್ಕಿ ಸ್ಥಳದಲ್ಲೇ ಮಹಿಳೆ ಸಾವು
ಹೊನ್ನಾವರ : ಪಟ್ಟಣದ ಕರ್ನಲ್ ಹಿಲ್ ಸಮೀಪ ರಾಷ್ಟಿçÃಯ ಹೆದ್ದಾರಿ 66 ರಲ್ಲಿ ಕಂಟೇನರ್ ಡಿಕ್ಕಿ ಹೊಡೆದು ಸ್ಕೂಟಿ ಹಿಂಬದಿ ಸವಾರೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
![ಸ್ಕೂಟಿಗೆ ಕಂಟೇನರ್ ಡಿಕ್ಕಿ ಸ್ಥಳದಲ್ಲೇ ಮಹಿಳೆ ಸಾವು 1 ಸ್ಕೂಟಿಗೆ ಕಂಟೇನರ್ ಡಿಕ್ಕಿ ಸ್ಥಳದಲ್ಲೇ ಮಹಿಳೆ ಸಾವು](https://i0.wp.com/canarabuzz.com/wp-content/uploads/2023/01/WhatsApp-Image-2023-01-11-at-11.32.18.jpeg?resize=351%2C761&ssl=1)
ಸಾವಿತ್ರಿ ಭಟ್ (64) ಮೃತ ದುರ್ದೈವಿ ಸಾವಿತ್ರಿ ತಮ್ಮ ಪತಿ ಜತೆಗೆ ಸ್ಕೂಟಿಯಲ್ಲಿ ಕುಮಟಾ ಭಾಗದಿಂದ ಹೊನ್ನಾವರಕ್ಕೆ ತೆರುಳುತ್ತಿದ್ದರು. ಈ ವೇಳೆ ಹಿಂಬದಿಯಿAದ ಬಂದ ಕಂಟೇನರ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಾವಿತ್ರಿ ಅವರ ದೇಹವು ಭಿದ್ರ ಭಿದ್ರವಾಗಿದೆ. ಸಾವಿತ್ರಿ ಪತಿ ಗಂಭಿರ ಗಾಯಗೊಂಡಿದ್ದು, ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದೆ. ನಿವೃತ್ತ ಬಿಎಸ್‌ಎನ್‌ಲ್ ಉದ್ಯೋಗಿಯಾಗಿದ್ದ ಸಾವಿತ್ರ ಭಟ್ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದ ರಭಸಕ್ಕೆ ಮಹಿಳೆ ದೇಹ ಭಿದ್ರ ಭಿದ್ರವಾಗಿದ್ದು. ಬೀಕರ ಅಪಘಾತ ಕಂಡು ವಾಹನ ಸವಾರರು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಸ್ಥಳಾಂತರಿಸುವ ಕಾರ್ಯ ಮಾಡಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಪಘಾತಕ್ಕೆ ಕಾರಣವಾದ ಕಂಟೇನರ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬAಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment