ನೀರಾವರಿ ಪಂಪಸೆಟ್‌ಗಳಿಗೆ ರೈತರ ಆಧಾರ ಲಿಂಕ್ ಕಡ್ಡಾಯ
ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಮೇ12ರಂದು ಆದೇಶ ಹೊರಡಿಸಿ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿರುವ 10 ಎಚ್.ಪಿ ವರೆಗಿನ ನೀರಾವರಿ ಪಂಪಸೆಟ್‌ಗಳ ಆ.ಆ. ಸಂಖ್ಯೆ/ಕನೆಕ್ಷನ್ ಐಡಿ/ಅಕೌಂಟ್ ಐ.ಡಿಗಳಿಗೆ ಸಂಬಂಧಿಸಿದ ಗ್ರಾಹಕರ ಆಧಾರ ಸಂಖ್ಯೆಗಳನ್ನು ಲಿಂಕ್ ಮಾಡುವಂತೆ ತಿಳಿಸಿದೆ.
ತಪ್ಪಿದಲ್ಲಿ ಸರ್ಕಾರವು ಆಧಾರ್ ನಂಬರ್ ಲಿಂಕ್ ಮಾಡದ ನೀರಾವರಿ ಪಂಪಸೆಟ್ ಸ್ಥಾವರಗಳಿಗೆ ಇನ್ನು ಮುಂದೆ ಸಹಾಯ ಧನವನ್ನು ಬಿಡುಗಡೆ ಮಾಡುವುದಿಲ್ಲವೆಂದು ನಿರ್ದೇಶನ ನೀಡಿರುತ್ತಾರೆ.
ಆದ್ದರಿಂದ ಗ್ರಾಹಕರ ಆಧಾರ ಸಂಖ್ಯೆಯ ವಿವರಗಳನ್ನು ಉಪ-ವಿಭಾಗ/ಶಾಖಾ ಕಚೇರಿಗಳಲ್ಲಿ ಕಡ್ಡಾಯವಾಗಿ ನೀಡಿ, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.
Leave a Comment