ಆಧಾರ್ ತಿದ್ದುಪಡಿ ನೋಂದಣಿ ಮೇಳ 29 30ಕ್ಕೆ
ಭಾರತೀಯ ಅಂಚೆ ತಂದೆ ಇಲಾಖೆಯ ಶಿರಸಿ ವಿಭಾಗವು .29 ಮತ್ತು 30ರಂದು ತಾಲೂಕಿನ ಕಾನಗೋಡಿನ ಸಾಮಾನ್ಯ ಸೇವಾ ಕೇಂದ್ರದಲ್ಲಿ ಬೃಹತ್ ಆಧಾರ ತಿದ್ದುಪಡಿ ಮತ್ತು ನೋಂದಣಿ ಮೇಳವನ್ನು ಆಯೋಜಿಸಿದೆ.
ಜನ್ಮ ದಿನಾಂಕದ ಬದಲಾವಣೆ, ಹೆಸರು ಬದಲಾವಣೆ, ವಿಳಾಸ ಬದಲಾವಣೆಗಳಿಗೆ ಅಗತ್ಯವಿರುವ ದಾಖಲೆಗಳನ್ನು ತ ರಬೇಕು.
ಮಕ್ಕಳಿಗೆ ಆಧಾರ್ ಮಾಡಿಸಲು ಜನ್ಮ ದಾಖಲೆ, ಮತ್ತು ತಾಯಿಯ ಆಧಾರ್ ಕಾರ್ಡ್ ಜೊತೆಗೆ ಮಗುವಿನೊಂದಿಗೆ ತಂದೆ- ತಾಯಿ ಬರಬೇಕು. ಸರಕಾರದ ವಿವಿಧ ಯೋಜನೆಗಳ ನೇರ ನಗದು ವರ್ಗಾವಣೆಗಾಗಿ ಆಧಾರ್ ಸೀಡಿಂಗ್ ಹಾಗೂ ಅಂಚೆ ಖಾತೆಗಳನ್ನು ತೆ ರೆದುಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ; 9902121392 948177562203- ಈ ಸಂಖ್ಯೆ ಗಳನ್ನು ಸಂಪರ್ಕಿಸಬಹುದಾ ಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Leave a Comment