ಬಿಜೆಪಿಯ ಮುಖಂಡ ಸುಬ್ರಹ್ಮಣ್ಯ ಶಾಸ್ತ್ರಿ ನಿಧನ
ಹೊನ್ನಾವರ: ತಾಲೂಕಿನ ಉತ್ಸಾಹಿ ಸಾಮಾಜಿಕ ಕಾರ್ಯಕರ್ತ, ಮುಖ೦ಡ ಸುಬ್ರಹ್ಮಣ್ಯ ಶಾಸ್ತ್ರಿ ತಮ್ಮ 53ನೇ ವಯಸ್ಸಿನಲ್ಲಿ ದೀರ್ಘಕಾಲೀನ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ಸಮಾಜವಾದಿ ಪಕ್ಷದಿಂದ ಉತ್ತರ ಕನ್ನಡ ಜಿಲ್ಲಾ ಪ೦ಚಾಯತದ ಮುಗ್ವಾ ಮತ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿ ಉತ್ತಮ ಕೆಲಸ ನಿರ್ವಹಿಸಿದ್ದ ಇವರು ಬಿಜೆಪಿ ಪಕ್ಷದತ್ತ ಮುಖ ಮಾಡಿದ್ದರು. ಮಹಿಳಾ ಮೀಸಲಾತಿ ಬಂದ ಮೇಲೆ ತಮ್ಮ ಪತ್ನಿ ಶ್ರೀಕಲಾ ಶಾಸ್ತ್ರಿಯನ್ನು ನಿಲ್ಲಿಸಿ ಗೆಲ್ಲಿಸಿದ್ದರು. ಇವರ ಅಧಿಕಾರವಧಿಯಲ್ಲಿ ಸಾಕ್ಕೋಡ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆಯು ಇಂದಿಗೂ ಮನೆ ಮನೆಗೆ ನೀರು ಸರಬರಾಜು ಆಗುತ್ತಿದೆ.
ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದ ಪೊತ್ಸಾಹಕರಾಗಿ ತಾಲೂಕಿನೆಲ್ಲಡೆ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದ ಇವರು ಇತ್ತೀಚಿನ ವರ್ಷದಲ್ಲಿ
ಅಡಿಕೆ ಹಾಳೆಯಿಂದ ಪ್ಲೇಟ್ ತಯಾರಿಸುವ ಉದ್ಯಮವನ್ನು ಆರ೦ಬಿ ಸಿದ್ದರು. ಸದಾ ಹಸನ್ಮುಖಿಯಾಗಿ ಎಲ್ಲರೊಂದಿಗೆ ವ್ಯವಹರಿಸುತ್ತಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಅನಾರೋಗ್ಯ ಕಾಡಿದಾಗ ಅಸಂಖ್ಯ ಮಿತ್ರರು ಕಾಳಜಿ ಸೂಚಿಸಿದ್ದರು. ಆದರೆ ಅವರು ಪತ್ನಿ ಮತ್ತು ವೈದ್ಯಕೀಯ ಪದವೀಧರರಾದ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ನಿಧನಕ್ಕೆ ಸಚಿವರಾದ ಮಂಕಾಳ ವೈದ್ಯ, ಶಾಸಕ ದಿನಕರ ಶೆಟ್ಟಿ, ಎಸ್‌ಆರ್ ಎಲ್ ಸಂಸ್ಥೆಯ ವೆಂಕಟರಮಣ ಹೆಗಡೆ, ಗ್ರಾ.ಪಂ. ಅಧ್ಯಕ್ಷ ಸುರೇಶ ಶೆಟ್ಟಿ, ಶಾಸ್ತ್ರಿಯವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಬಿಜೆಪಿಯ ಮುಖಂಡ ಸುಬ್ರಹ್ಮಣ್ಯ ಶಾಸ್ತ್ರಿ ನಿಧನ
ಸಂಸದ ಹೆಗಡೆ ಸಂತಾಪ
ಸಾಮಾಜಿಕ ಕಾರ್ಯಕರ್ತರೂ ಹಾಗೂ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾದ ಸುಬ್ರಮಣ್ಯ ಶಾಸ್ತ್ರಿಯವರು ನಮ್ಮನ್ನಗಲಿದ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ನೋವುಂಟಾಯಿತು ಎಂದು ಸಂಸದ
ಅನಂತಕುಮಾರ ಹೆಗಡೆ
ತಿಳಿಸಿದ್ದಾರೆ. ಸರಳ, ಸಜ್ಜನ ವ್ಯಕ್ತಿತ್ವದ ಇವರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತ ಬಂದಿದ್ದರು. ಅವರ ಆತ್ಮಕ್ಕೆ ಸದ್ಗತಿಯನ್ನೂ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಭಾವಪೂರ್ಣ ಶ್ರದ್ದಾಂಜಅಯನ್ನು ಸಮರ್ಪಿಸುತ್ತಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment