ಹೊನ್ನಾವರ ಸಿರಿ ಬಿ.ಎಸ್ .ಡಬ್ಲ್ಯೂ ಕಾಲೇಜಿನಲ್ಲಿ ಉದ್ಯೋಗ ಮೇಳ 2024
ಹೊನ್ನಾವರ: ತಾಲೂಕಿನ ಅರೇಅಂಗಡಿಯಲ್ಲಿ ಕರಾವಳಿ ಟೀಚರ್ಸ್
ಹೆಲ್ಪ ಲೈನ್ ಧಾರವಾಡ ಹಾಗೂ ಸಿರಿ ಬಿ ಎಸ್ ಡಬ್ಲ್ಯೂ, ಕಾಲೇಜ್ ಇವರ ವತಿಯಿಂದ ಉದ್ಯೋಗ ಮೇಳವನ್ನು ಆಯೋಜಿಸಿದ್ದು, ಫೆ.11 ರಂದು ಮುಂಜಾನೆ 9:30 ರಿಂದ ನೇರ ಸಂದರ್ಶನದ ಮೂಲಕ ನೇರವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಪಿಯುಸಿ ನಂತರದ ವಿದ್ಯಾರ್ಹತೆ ಹೊಂದಿರುವ ಯುವಕ ಯುವತಿಯರು ಇದರಲ್ಲಿ ಪಾಲ್ಗೊಳ್ಳಬಹುದು. ಎಕ್ಸಿಸ್ ಬ್ಯಾಂಕ್, ಐಸಿಐಸಿಎ ಬ್ಯಾಂಕ್, ಟೀಮ್ ಲಿಸ್ ಕಂಪನಿ, ಸನ್ ಇಂಡಿಯಾ, ಕರಾವಳಿ ಟೀಚರ್ಸ್ ಹೆಲ್ಪ ಲೈನ್ ಇವರು ಸಂದರ್ಶನ ನಡೆಸಲು ಅಅಗಮಿಸಲಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಅರುಣ ನಾಯ್ಕ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9481681780, 9448446563, 8431525339, 9743218480
Leave a Comment