ಗೃಹರಕ್ಷಕ-ಗೃಹರಕ್ಷಕಿಯರ ಭರ್ತಿಗಾಗಿ ಅರ್ಜಿ ಆಹ್ವಾನ 2024
ಕಾರವಾರ: ಜಿಲ್ಲಾ ಗೃಹರಕ್ಷಕ ದಳದ ಕಾರವಾರ, ಚೆಂಡಿಂಯಾ, ಮಲ್ಲಾಪುರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಜೊಯಿಡಾ ಘಟಕ/ ಉಪಘಟಕಗಳಲ್ಲಿ ಖಾಲಿ ಇರುವ 202 ಸ್ವ- ಯಂ ಸೇವಕ ಗೃಹರಕ್ಷಕ/ ಗೃಹರಕ್ಷಕಿಯರ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಫೆ.28ರೊಳಗಾಗಿ ಜಿಲ್ಲಾ ಸಮಾದೇಷ್ಟರ ಕಛೇರಿ. ಗೃಹರಕ್ಷಕ ದಳ, ಸರ್ವೋದಯ ನಗರ ದಿವೇಕರ್ ಕಾಮರ್ಸ್ ಕಾಲೇಜು ಎದುರಿಗೆ, ಕೋಡಿಬಾಗ, ಕಾರವಾರ ಕಚೇರಿಯಲ್ಲಿ 10ನೇ ತರಗತಿಯ ಅಂಕಪಟ್ಟಿ ಧೃಡೀಕೃತ ಪ್ರತಿ, ಆಧಾರ್ ಕಾರ್ಡ್ ಪ್ರತಿಯನ್ನು ತೋರಿಸಿ ಉಚಿತವಾಗಿ ಅರ್ಜಿಗಳನ್ನು ಪಡೆದು, ಅರ್ಜಿ ಸಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕ ದಳ ಕಛೇರಿ 99. ថ : 08382- 200 137/ 226 361ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಸಮಾದೇಷ್ಟರು, ಗೃಹರಕ್ಷಕ ದಳ, ಉತ್ತರ ಕನ್ನಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
Leave a Comment