ಹೊನ್ನಾವರ:
ಹಳದೀಪುರ ಸಾಲಿಕೇರಿಯ ಶ್ರೀ ಗಣಪತಿ ದೇವಸ್ಥಾನದಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೇಟ್ಟಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು `ಆಹಾರ ಭದ್ರತೆ ಕಾಪಾಡಲು ರೈತ ಬಾಂಧವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆಯವರು ಪ್ರತಿ ಗ್ರಾಮ ಪಂಚಾಯಿತಿಗೆ ತೆರಳಿ ಕೃಷಿ ಉತ್ಪಾದನೆ ಹೆಚ್ಚಿಸುವ ತಾಂತ್ರಿಕತೆಗಳನ್ನು ಮತ್ತು ಇಲಾಖಾ ಯೋಜನೆಗಳನ್ನು ಹೆಚ್ಚು-ಹೆಚ್ಚು ರೈತರಿಗೆ ತಿಳಿಸಬೇಕು ಎಂದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ್ ಕುರಿಯವರ್, ಹಳದೀಪುರ ಗ್ರಾ.ಪಂ.ಸದಸ್ಯರಾದ ವಿನಾಯಕ ಶೇಟ, ರತ್ನಾಕರ ನಾಯ್ಕ, ದೇವಾಲಯದ ಮುಖ್ಯಸ್ಥ ವಿ.ಜಿ.ಶೆಟ್ಟಿ ಹಾಗೂ ಹಳದೀಪುರದ ವ್ಯಾಪ್ತಿಯ ರೈತ ಬಾಂಧವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕೃಷಿ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಸ್ವಾಗತಿಸಿ ವಂದಿಸಿದರು.
Leave a Comment