ಹೊನ್ನಾವರ:ತಾಲೂಕಿನ ಮಾವಿನಕುರ್ವಾದ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಶ್ರೀದೇವರಿಗೆ ರಥಕಾಣಿಕೆ ಫಲ ಸಮರ್ಪಣೆ ಮಾಡಿದರು. ಸಂಜೆ ವಿವಿಧ ವಾದ್ಯವೃಂದದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ಎಳೆಯಲಾಯಿತು. ನಂತರ ಪ್ರಸಾದ ಭೋಜನ ನಡೆಯಿತು. … [Read more...] about ಮಾವಿನಕುರ್ವಾ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವ
National News
ಪಟ್ಟಣದ ಬಂದರಿನ ಮೀನು ಮಾರುಕಟ್ಟೆಯ ಈಗಿನ ನಿರ್ವಹಣಾ ಟೇಂಡರ್‍ನ್ನು ಮಹಿಳಾ ಮೀನುಗಾರರ ಸಂಘಕ್ಕೆ ಮೀಸಲಿಡಬೇಕು ಮತ್ತು ಈಗಿನ ನೂತನ ಮೀನುಮಾರುಕಟ್ಟೆಯಲ್ಲಿ ಎಲ್ಲಾ ಮೀನುಗಾರರು ವ್ಯಾಪಾರ ನಡೆಸಬೇಕು ಎಂದು ಆಗ್ರಹಿಸಿ ಜಲದೇವತಾ ಮಹಿಳಾ ಮೀನುಗಾರ ಸಂಘದ ಪ್ರಮುಖರು ಪ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು
ಹೊನ್ನಾವರ: ಪಟ್ಟಣದ ಬಂದರಿನ ಮೀನು ಮಾರುಕಟ್ಟೆಯ ಈಗಿನ ನಿರ್ವಹಣಾ ಟೇಂಡರ್‍ನ್ನು ಮಹಿಳಾ ಮೀನುಗಾರರ ಸಂಘಕ್ಕೆ ಮೀಸಲಿಡಬೇಕು ಮತ್ತು ಈಗಿನ ನೂತನ ಮೀನುಮಾರುಕಟ್ಟೆಯಲ್ಲಿ ಎಲ್ಲಾ ಮೀನುಗಾರರು ವ್ಯಾಪಾರ ವಹಿವಾಟನ್ನು ನಡೆಸಬೇಕು ಎಂದು ಆಗ್ರಹಿಸಿ ಜಲದೇವತಾ ಮಹಿಳಾ ಮೀನುಗಾರ ಸಂಘದ ಪ್ರಮುಖರು ಬುಧವಾರ ಪಟ್ಟಣದಲ್ಲಿ ಪ್ರತಿಭಟಿಸಿ ಪ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ನೂತನ ಮೀನುಮಾರುಕಟ್ಟೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ನಂತರ ಪ.ಪಂ … [Read more...] about ಪಟ್ಟಣದ ಬಂದರಿನ ಮೀನು ಮಾರುಕಟ್ಟೆಯ ಈಗಿನ ನಿರ್ವಹಣಾ ಟೇಂಡರ್‍ನ್ನು ಮಹಿಳಾ ಮೀನುಗಾರರ ಸಂಘಕ್ಕೆ ಮೀಸಲಿಡಬೇಕು ಮತ್ತು ಈಗಿನ ನೂತನ ಮೀನುಮಾರುಕಟ್ಟೆಯಲ್ಲಿ ಎಲ್ಲಾ ಮೀನುಗಾರರು ವ್ಯಾಪಾರ ನಡೆಸಬೇಕು ಎಂದು ಆಗ್ರಹಿಸಿ ಜಲದೇವತಾ ಮಹಿಳಾ ಮೀನುಗಾರ ಸಂಘದ ಪ್ರಮುಖರು ಪ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು
ಏಪ್ರೀಲ್ 14 ರಿಂದ 18ರವರೆಗೆ ಅಂಕೋಲಾ ಕಲಾಮೇಳ
ಅಂಕೋಲಾ : ಇಲ್ಲಿಯ ಸಾಂಸ್ಕೃತಿಕ ಕಲಾ ವೇದಿಕೆಯ ಆಶ್ರಯದಲ್ಲಿ ಏಪ್ರೀಲ್ 14 ರಿಂದ 18 ರವರೆಗೆ ನಡೆಯುವ ಅಂಕೋಲಾ ಸಾಂಸ್ಕೃತಿಕ ಕಲಾಮೇಳದ ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಗೌರವಾಧ್ಯಕ್ಷ ಹಾಗೂ ಕಾರವಾರ ಅಂಕೋಲಾ ವಿಧಾನಸಭಾ ಶಾಸಕ ಸತೀಶ ಸೈಲ್ ಪಟ್ಟಣದ ಕಾಮತ ಪ್ಲಸ್ ಹೊಟೇಲ್ ಸಭಾಭವನದಲ್ಲಿ ಬಿಡುಗಡೆ ಮಾಡಿದರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಸತೀಶ ಸೈಲ್, ಗ್ರಾಮೀಣ ಕಲೆಯನ್ನು ಪ್ರೋತ್ಸಾಹಿಸುವ ಮತ್ತು ವೈವಿಧ್ಯಮಯ ಕಲೆ , ಸಂಸ್ಕೃತಿಯನ್ನು ಪರಿಚಯಿಸುವ … [Read more...] about ಏಪ್ರೀಲ್ 14 ರಿಂದ 18ರವರೆಗೆ ಅಂಕೋಲಾ ಕಲಾಮೇಳ
ಮಕ್ಕಳ ಸಾಹಿತ್ಯ ವೇದಿಕೆ ಉದ್ಘಾಟನೆ
ಹೊನ್ನಾವರ: ಹೊನ್ನಾವರದ ಬಿ.ಆರ್.ಸಿ.ಯಲ್ಲಿ ಮಕ್ಕಳ ಸಾಹಿತ್ಯ ವೇದಿಕೆಯ ಹೊನ್ನಾವರ ಘಟಕ ಉದ್ಘಾಟನೆ ಆಯಿತು. ಮಕ್ಕಳಲ್ಲಿ ಸಾಹಿತ್ಯದ ಸದಭಿರುಚಿ ಬೆಳೆಸುವದು ಮತ್ತು ಮಕ್ಕಳಲ್ಲಿ ಇರುವ ಸಾಹಿತ್ಯ ಚಟುವಟಿಕೆಯನ್ನು ಗುರುತಿಸಿ ಸಾಹಿತ್ಯ ವಲಯದಲ್ಲಿ ಮುಖ್ಯ ವಾಹಿನಿಗೆ ತರುವುದು ಈ ಘಟಕದ ಉದ್ದೇಶ ಎಂದು ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಹೇಳಿದರು. ಈ ಸಂದರ್ಭದಲ್ಲಿ ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ, ಬಿ.ಇ.ಓ. ಜಿ.ಎಸ್.ಭಟ್ಟ. ಉತ್ತರ ಕನ್ನಡ ಜಿಲ್ಲಾ ಕನ್ನಡ … [Read more...] about ಮಕ್ಕಳ ಸಾಹಿತ್ಯ ವೇದಿಕೆ ಉದ್ಘಾಟನೆ
ಕಿರವತ್ತಿ ಅರಣ್ಯ ಇಲಾಖೆಯಲ್ಲಿ ಹನುಮ ಜಯಂತಿ ಆಚರಣೆ
ಶಿರಸಿ: ಪ್ರತಿ ವರ್ಷದಂತೆ ಕಿರವತ್ತಿ ಅರಣ್ಯ ಇಲಾಖೆಯವರು ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಇವತ್ತು ಮುಂಜಾನೆಯಿಂದಲೇ ಪೂಜಾ ಕಾರ್ಯಗಳೆಲ್ಲಾ ನಡೆದು, ಮಧ್ಯಾಹ್ನ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆಯನ್ ನು ಮಾಡಲಾಯಿತು. ಸಾವಿರಾರು ಭಕ್ತರು ಪೂಜಾಕಾರ್ಯ, ಅನ್ನಸಂತರ್ಪಣೆ ಕಾರ್ಯದಲ್ಲಿ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾದರು. ಸಾಂಯಕಾಲ ಆಂಜನೇಯ ಮೂರ್ತಿಯ ಪಲ್ಲಕ್ಕಿ ಉತ್ಸವವನ್ನು ಸ್ಥಳೀಯ ಜನರೊಂದಿಗೆ ಸೇರಿ ಅರಣ್ಯ ಇಲಾಖೆಯವರು ನಡೆಸಿಕೊಟ್ಟರು. … [Read more...] about ಕಿರವತ್ತಿ ಅರಣ್ಯ ಇಲಾಖೆಯಲ್ಲಿ ಹನುಮ ಜಯಂತಿ ಆಚರಣೆ




