ಕುಮಟಾ:ಪ್ರವಾಸಕ್ಕೆಂದು ಕುಮಟಾದ ವನ್ನಳ್ಳಿ ಬೀಚ್‌ಗೆ ಆಗಮಿಸಿದ್ದ ಐವರು ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರುಪಾಲಾಗಿರುವ ಘಟನೆ ನಡೆದಿದೆ.ಹಳಿಯಾಳ ಮೂಲದ ಪ್ರಜ್ವಲ್ ಲೋಪಿಸ್ (19), ಫ್ರಾನ್ಸಿಸ್ ಬ್ರಿಗೆನ್ಸಾ (18) ನೀರುಪಾಲಾದವರು. ಇವರು ಇನ್ನು ಮೂರು ವಿದ್ಯಾರ್ಥಿಗಳನ್ನೊಡಗೂಡಿ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿದ್ದಾರೆ. ಮೂವರನ್ನು ಸ್ಥಳೀಯರು ರಕ್ಷಿಸಿದ್ದು, ಇನ್ನಿಬ್ಬರಿಗಾಗಿ ಕರಾವಳಿ ಕಾವಲು ಪಡೆಯ ಸಿಬ್ಬಂದಿ ತೀವ್ರ ಶೋಧ ನಡೆಸಿದ್ದಾರೆ. … [Read more...] about ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳು ನೀರುಪಾಲು
National News
ವಕ್ಫ ಬೋರ್ಡನ ಕಚೇರಿ ಸ್ಥಳಾಂತರಕ್ಕೆ ವಿರೋಧ
ದಾಂಡೇಲಿ:ಉತ್ತರ ಕನ್ನಡ ಜಿಲ್ಲಾ ವಕ್ಫ ಬೋರ್ಡನ ಕಚೇರಿಯನ್ನು ಕಾರವಾರದಿಂದ ಶಿರಸಿಗೆ ಸ್ಥಳಾಂತರಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಕಾರವಾರದಲ್ಲಿಯೇ ಈ ಕಚೇರಿ ಮುಂದುವರೆಯಬೇಕು ಎಂದು ಸಮಾಜಿಕ ಕಾರ್ಯಕರ್ತ, ಮುಸ್ಲಿಂ ಸಮುದಾಯದ ಪ್ರಮುಖ ಅಕ್ರಂ ಖಾನ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಮಂಗಳವಾರ ಸಂತೋಷ್ ಹೊಟೆಲ್ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈ ಒತ್ತಾಯದ ಮನವಿಯನ್ನು ಸರಕಾರಕ್ಕೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ … [Read more...] about ವಕ್ಫ ಬೋರ್ಡನ ಕಚೇರಿ ಸ್ಥಳಾಂತರಕ್ಕೆ ವಿರೋಧ
ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ
ಕಾರವಾರ:ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಸಿಹಿ ನೀರಿನ ಬಾವಿ ಸೇರಿದಂತೆ ಕೃಷಿ ಭೂಮಿಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ಬರ ಪರಿಸ್ಥಿತಿ ನಡುವೆ ಇದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಒಂದು ಮಗ್ಗುಲಲ್ಲಿ ಉಪ್ಪು ನೀರಿನ ಬೃಹತ್ ಆಗರವನ್ನೆ ಹೊಂದಿರುವ ಕರಾವಳಿ ತಾಲೂಕುಗಳು ಇದೀಗ ಅದರಿಂದಲೇ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಸಮುದ್ರದಲ್ಲಿ ಉಬ್ಬರವಿಳತವಾದಾಗ ನದಿ ಮೂಲಕ ಹಿಮ್ಮುಕವಾಗಿ ಹರಿಯುವ ಉಪ್ಪು ನೀರು ಈ ಭಾಗದ … [Read more...] about ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆದ ಸುದ್ದಿಗೊಷ್ಟಿ
ಕಾರವಾರ:ಜೂನ್ 21 ರಂದು ಆಚರಿಸಲಾಗುವ 3 ನೇ ಅಂತರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಯೋಗಮಯ ಕರ್ನಾಟಕ ಅಭಿಯಾನವನ್ನು ಆರಂಭಿಸಲಾಗಿದ್ದು ಜಿಲ್ಲೆಯಲ್ಲಿ ಯೋಗಮಯ ಉತ್ತರಕನ್ನಡ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಸುದ್ದಿಗೊಷ್ಟಿ ನಡೆಸಿ ವಿವರ ನೀಡಿದ ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರ್‍ಲಾಲ್ ಆರ್ಯ, ಅಭಿಯಾನದ ಅಂಗವಾಗಿ ಯೋಗ ಶಿಬಿರ, ಯೋಗ ಶಿಕ್ಷಕರ ತರಬೇತಿ ಶಿಬಿರ, ಬೊಜ್ಜು ನಿವಾರಣಾ ಶಿಬಿರ, ಮಧುಮೇಹ ನಿಯಂತ್ರಣ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು … [Read more...] about ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆದ ಸುದ್ದಿಗೊಷ್ಟಿ
ರವೀಂದ್ರನಾಥ ಠಾಗೋರ ಜಯಂತಿ ಆಚರಣೆ
ಕಾರವಾರ:ನಗರದ ರವೀಂದ್ರನಾಥ ಟಾಗೋರ ಕಡಲ ತೀರದ ಪ್ರವೇಶ ದ್ವಾರದಲ್ಲಿರುವ ರವೀಂದ್ರರ ಪ್ರತಿಮೆಗೆ ಪೂಜಿಸುವ ಮೂಲಕ ಬಂಗಾಳಿಗರು ರವೀಂದ್ರನಾಥರ ಜಯಂತಿ ಆಚರಿಸಿದರು. ಬಂಗಾಳಿ ಕ್ಯಾಲೆಂಡರ್ ಪ್ರಕಾರ ಬೈಶಾಖ ಮಾಸದ 25 ನೇ ದಿನಾಂಕದಂದು ಬಂಗಾಳದಲ್ಲಿ ಟಾಗೋರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ತಮ್ಮ ವಿವಿಧ ವ್ಯವಹಾರಗಳಿಗಾಗಿ ನೆಲೆಸಿರುವ ಬಂಗಾಳಿಗರು ಇಲ್ಲಿನ ರವೀಂದ್ರ ಪ್ರತಿಮೆಯನ್ನು ಸ್ವಚ್ಛಗೊಳಿಸಿ ಬಳಿಕ ಮಾಲಾರ್ಪಣೆ ಮಾಡಿ … [Read more...] about ರವೀಂದ್ರನಾಥ ಠಾಗೋರ ಜಯಂತಿ ಆಚರಣೆ




