ಕಾರವಾರ:ಕಾರು ಕಂದಕಕ್ಕೆ ಬಿದ್ದ ಪರಿಣಾಮ ಚಾಲಕ ಸಾವನಪ್ಪಿದ ಘಟನೆ ಹರೂರು ಸಮೀಪದ ಕುಚೇಗಾರದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮಲ್ಲಾಪುರದಿಂದ ಯಲ್ಲಾಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಕಂದಕ್ಕೆ ಬಿದ್ದಿದ್ದು,ಯಲ್ಲಾಪುರದ ನಿವಾಸಿ, ಹಾಲಿ ಕೈಗಾ ಟೌನಶಿಪ್‍ನಲ್ಲಿ ವಾಸವಾಗಿದ್ದ ಅನಂತ ಭಟ್ಟ ಮೃತರು. ಅನಂತ ಭಟ್ಟರ ಮಕ್ಕಳಾದ ಸುಪ್ರೀತ ಭಟ್ಟ ಹಾಗೂ ಸುನೇತ್ರ ಭಟ್ಟ ಗಾಯಗೊಂಡವರು.ಅನಂತ ಭಟ್ಟ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆ … [Read more...] about ಕಾರು ಕಂದಕಕ್ಕೆ ಬಿದ್ದ ಪರಿಣಾಮ ಚಾಲಕ ಸಾವು; ಇಬ್ಬರಿಗೆ ಗಾಯ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಕರ್ನಾಟಕ ಸಂಘದ ಪಂಚಗಾನ ಭವನದ ಆಡಳಿತ ಮಂಡಳಿಯ ವಿರುದ್ದ ಪ್ರತಿಭಟನೆ
ದಾಂಡೇಲಿ : ನಗರದ ಕರ್ನಾಟಕ ಸಂಘದ ಪಂಚಗಾನ ಸಭಾಭವನದಲ್ಲಿ ದಾಂಡೇಲಿ ತಾಲೂಕು ರಚನಾ ಸಮಿತಿಯ ಮುಂದುವರಿದ ಭಾಗವಾಗಿ ರಚಿಸಲಾದ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಉದ್ಘಾಟನಾ ಸಮಾರಂಭವನ್ನು ನಡೆಸಲು ಅವಕಾಶ ನೀಡದಿರುವುದನ್ನು ಖಂಡಿಸಿ ಶುಕ್ರವಾರ ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯು ಪ್ರತಿಭಟನೆಯನ್ನು ಹಮ್ಮಿಕೊಂಡಿತು.ಈ ಸಂಧರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರದ … [Read more...] about ಕರ್ನಾಟಕ ಸಂಘದ ಪಂಚಗಾನ ಭವನದ ಆಡಳಿತ ಮಂಡಳಿಯ ವಿರುದ್ದ ಪ್ರತಿಭಟನೆ
ಪಶುಭಾಗ್ಯ ಯೋಜನೆಯಡಿಯಲ್ಲಿ ಸಹಾಯಧನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನ
ಕಾರವಾರ:ಪಶು ಸಂಗೋಪನಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಡಿಯಲ್ಲಿ ಸಹಾಯಧನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.ಅಮೃತ ಯೋಜನೆಯಲ್ಲಿ ಕುರಿ/ಮೇಕೆ ಘಟಕ ವೆಚ್ಚವು ರೂ. 10 ಸಾವಿರ ಇದ್ದು ಸಾಮಾನ್ಯ ವರ್ಗದವರಿಗೆ 7500 ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ. 9 ಸಾವಿರ ಸಹಾಯಧನವಿದ್ದು ಮಹಿಳೆಯರಿಗಾಗಿಯೇ ಇರುವ ಯೋಜನೆಯಾಗಿದೆ. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ಎರಡು ಎಮ್ಮೆ, ಮಿಶ್ರತಳಿ … [Read more...] about ಪಶುಭಾಗ್ಯ ಯೋಜನೆಯಡಿಯಲ್ಲಿ ಸಹಾಯಧನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನ
ಜೂನ 30 ರಿಂದ 7 ದಿನಗಳ ಕಾಲ ಸಸ್ಯ ಸಂತೆ
ಶಿರಸಿ ತೋಟಗಾರಿಕಾ ಉಪನಿರ್ದೇಶಕರ ಕಛೇರಿ ಆವರಣದಲ್ಲಿ ಜೂನ 30 ರಿಂದ 7 ದಿನಗಳ ಕಾಲ ಸಸ್ಯ ಸಂತೆ ಏರ್ಪಡಿಸಲಾಗಿರುತ್ತದೆ. ತೋಟಗಾರಿಕಾ ಬೆಳೆಗಳ ಕಸಿ ಸಸಿಗಳನ್ನು ಒಂದೇ ಸೂರಿನಡಿ ದೊರಕಿಸಿಕೊಡುವ ಉದ್ದೇಶದಿಂದ ಸಸ್ಯ ಸಂತೆಯನ್ನು ಏರ್ಪಡಿಸಲಾಗಿದ್ದು ಇದರ ಸದುಪಯೋಗವನ್ನು ರೈತರು ಹಾಗೂ ಸಾರ್ವಜನಿಕರು ಪಡೆಯಬೇಕೆಂದು ಶಿರಸಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. … [Read more...] about ಜೂನ 30 ರಿಂದ 7 ದಿನಗಳ ಕಾಲ ಸಸ್ಯ ಸಂತೆ
ತಾತ್ಕಾಲಿಕ ಯೋಗ ಶಿಕ್ಷಕ ಹುದ್ದೆಗಾಗಿ ನೇರ ಸಂದರ್ಶನ
ಶಿರಸಿ ಅರಣ್ಯ ಮಹಾವಿದ್ಯಾಲಯ ತಾತ್ಕಾಲಿಕ ಯೋಗ ಶಿಕ್ಷಕ ಹುದ್ದೆಗಾಗಿ ಜುಲೈ 6 ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ಏರ್ಪಡಿಸಿದೆ. ಯೋಗ ಶಿಕ್ಷಣದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ದಾಖಲೆಗಳು ಹಾಗೂ ದಾಖಲೆಗಳ ಎರಡು ಪ್ರತಿಗಳೊಂದಿಗೆ ಅರಣ್ಯ ಮಹಾವಿದ್ಯಾಲಯ ಶಿರಸಿಯವರ ಕಾರ್ಯಾಲಯದಲ್ಲಿ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. … [Read more...] about ತಾತ್ಕಾಲಿಕ ಯೋಗ ಶಿಕ್ಷಕ ಹುದ್ದೆಗಾಗಿ ನೇರ ಸಂದರ್ಶನ

